ಉತ್ತರ ಪತ್ರಿಕೆಯ ಮೇಲೆ ಮೂತ್ರ ವಿಸರ್ಜಿಸಿ ವಿದ್ಯಾರ್ಥಿನಿಗೆ ಫಜೀತಿ ತಂದಿಟ್ಟ ಕೋತಿ!!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪರೀಕ್ಷೆ ಬರೆಯುತ್ತಿದ್ದ ವೇಳೆ ಉತ್ತರ ಪತ್ರಿಕೆಯ ಮೇಲೆ ಕೋತಿ ಮೂತ್ರ ವಿಸರ್ಜಿಸಿ ವಿದ್ಯಾರ್ಥಿನಿಯನ್ನು ಫಜೀತಿಗೊಳಪಡಿಸಿದ ಅಪರೂಪದ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಇದೀಗ ತನಗೆ ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ವಿದ್ಯಾರ್ಥಿನಿ ಆಗ್ರಹಿಸಿದ್ದಾಳೆ.
ಕಾಡುಗಳು ತುಂಬಿದ್ದ ಸ್ಥಳಲದಲ್ಲಿನ ಶಾಲೆಯೊಂದರಲ್ಲಿ ಎಟೆಯೂರು ಮಾವಂಡಿಯೂರು ಬ್ರದರ್ಸ್ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿ ಶಿಫ್ಲಾ ಎಂಬಾಕೆ ಒಂದು ಗಂಟೆ ಅವಧಿಯ ಪ್ಲಸ್ ಒನ್ ಸಸ್ಯಶಾಸ್ತ್ರ ಪರೀಕ್ಷೆ ಬರೆಯುತ್ತಿದ್ದಳು. ಪರೀಕ್ಷೆ ಆರಂಭವಾದ ೧೫ ನಿಮಿಷಗಳಲ್ಲಿ ಶಾಲೆಯ ಮಾಡಿನ ಮೇಲಿದ್ದ ಕೋತಿ ಮೂತ್ರ ವಿಸರ್ಜನೆ ಮಾಡಿದೆ. ಪರಿಣಾಮವಾಗಿ ಶಿಫ್ಲಾಳ ಉತ್ತರ ಪತ್ರಿಕೆ, ಹಾಲ್ ಟಿಕೆಟ್ ಒದ್ದೆಯಾಗಿದೆ. ಈ ಬಗ್ಗೆ ಶಿಕ್ಷಕರಿಗೆ ಹೇಳಿದಾಗ ಬೇರೆ ಉತ್ತರ ಪತ್ರಿಕೆಗಳಿಲ್ಲ ಎಂಬ ಉತ್ತರ ಬಂದಿದೆ. ಪ್ರಾಂಶುಪಾಲರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಅವರು ಉತ್ತರ ಪತ್ರಿಕೆ ವ್ಯವಸ್ಥೆ ಮಾಡಿ ಒದಿಸಿದರಾದರೂ ಆ ವೇಳೆಗಾಗಲೇ ಸುಮಾರು ಅರ್ಧ ತಾಸು ಕಳೆದುಹೋಗಿದೆ.
ಇದೀಗ ತಾನು ಕಷ್ಟಪಟ್ಟು ಓದಿದರೂ ಸರಿಯಾಗಿ ಪರೀಕ್ಷೆಗೆ ಬರೆಯಲು ಸಾಧ್ಯವಾಗಿಲ್ಲ. ಮತ್ತೆ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು ಎಂದು ಆಕೆ ಮನವಿ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!