ಮೆಟ್ರೋ ತಡೆಗೋಡೆಗೆ ಗೂಡ್ಸ್ ಲಾರಿ ಡಿಕ್ಕಿ,ಟ್ರಾಫಿಕ್‌ ಜಾಮ್‌, ಗಂಟೆಯಿಂದ ನಿಂತಲ್ಲೇ ನಿಂತ ಗಾಡಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ನಾಗವಾರ-ಹೆಬ್ಬಾಳ ಮಾರ್ಗದ ಕೆಂಪಾಪುರದ ಬಳಿ ಗೂಡ್ಸ್ ಲಾರಿ ಮೆಟ್ರೋ ತಡೆಗೋಡೆಗೆ ಡಿಕ್ಕಿ ಹೊಡೆದಿದೆ.

ಇಂದು  ಬೆಳಗ್ಗೆ 7ಗಂಟೆ ಸುಮಾರಿಗೆ ಈ ಅವಘಡ ಸಂಭವಿಸಿದ್ದು. ನಿಯಂತ್ರಣ ತಪ್ಪಿ ಗೂಡ್ಸ್ ಲಾರಿ ಮೆಟ್ರೋ ಕಾಮಗಾರಿ ನಡೆಯುತ್ತಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಔಟರ್‌ರಿಂಗ್ ರೋಡ್ ಸರ್ವೀಸ್ ರಸ್ತೆಯ ಮುಖ್ಯರಸ್ತೆಯಲ್ಲಿ 10 ಚಕ್ರದ ಲಾರಿ ಮೆಟ್ರೋ ಕಾಮಗಾರಿಯ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಎರಡು ಜೆಸಿಬಿ ಬಳಸಿ ಪೊಲೀಸರು ಲಾರಿಯನ್ನು ತೆಗೆಯಲು ಪ್ರಯತ್ನಪಡುತ್ತಿದ್ದಾರೆ.

ಈ ಅವಘಡದಿಂದಾಗಿ ರಸ್ತೆ ಸಂಪೂರ್ಣ ಬಂದ್ ಆಗಿದ್ದು, 10ಕಿಮೀವರೆಗೂ ಟ್ರಾಫಿಕ್ ಜಾಮ್  ಉಂಟಾಗಿದೆ. ಹೆಬ್ಬಾಳದಿಂದ ರಾಮಮೂರ್ತಿನಗರದವರೆಗೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ಆಗಿದೆ. ಇದರಿಂದಾಗಿ ಸತತ 1 ಗಂಟೆಗಳ ಕಾಲ ವಾಹನಗಳು ನಿಂತಲ್ಲೇ ನಿಂತು, ವಾಹನ ಚಾಲಕರು ಪರದಾಡುವಂತಾಯಿತು. ಕಾದು ಬೇಸತ್ತು ಹೋಗಿ, ಕೊನೆಗೆ ಟೈಂ ಆದ ಹಿನ್ನೆಲೆ ಬೈಕ್ ಸವಾರರು ಅಪಘಾತಗೊಂಡಿರುವ ಲಾರಿ ಕೆಳಗೆ ನುಗ್ಗಿಸಿ ಮುಂದೆ ಸಾಗುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!