ಹೊಸದಿಗಂತ ಡಿಜಿಟಲ್ ಡೆಸ್ಕ್:
ಗೂಡ್ಸ್ ರೈಲು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದು ಹಳಿ ತಪ್ಪಿದ ಘಟನೆ ಉತ್ತರ ಪ್ರದೇಶದ ಆಗ್ರಾ ಬಳಿ ಶನಿವಾರ ನಡೆದಿದೆ. ಶನಿವಾರ ಬೆಳಗ್ಗೆ ಬಂಸಿಪಹಾರ್‌ಪುರ-ರೂಪ್ ಬಾಸ್ ರೈಲು ವಿಭಾಗದಲ್ಲಿ ಗೂಡ್ಸ್ ರೈಲು ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ನಂತರ ಹಳಿತಪ್ಪಿದ್ದು, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ಗಾಯಗೊಂಡ ಆರು ಜನರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಅಪಘಾತ ಮರುಸ್ಥಾಪನೆ ರೈಲು ತಕ್ಷಣ ಘಟನೆಯ ಸ್ಥಳಕ್ಕೆ ಹೊರಟಿದೆ. ಇದೇ ತಿಂಗಳ 21ರಂದು ವಿಜಯನಗರದಲ್ಲಿ ಗೂಡ್ಸ್ ರೈಲು ಕೂಡ ಹಳಿತಪ್ಪಿತ್ತು. ಒಡಿಶಾ ರೈಲು ಅಪಘಾತದ ನಂತರ, ಸರಕು ರೈಲುಗಳು ಆಗಾಗ್ಗೆ ಹಳಿತಪ್ಪುತ್ತಿವೆ. ಅಪಘಾತದಿಂದ ಹೆಚ್ಚಿನ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.