Wednesday, June 7, 2023

Latest Posts

ಉದ್ಯೋಗ ತೊರೆಯಲು ಸಿಬ್ಬಂದಿಗೆ ಒಂದು ವರ್ಷ ಉಚಿತ ಸಂಬಳದ ಆಮಿಷ ಒಡ್ಡುತ್ತಿದೆ ಗೂಗಲ್, ಅಮೇಜಾನ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಆರ್ಥಿಕ ಅನಿಶ್ಚಿತತೆಯ ಕಾರಣದಿಂದಾಗಿ ಜಾಗತಿಕವಾಗಿ ಉದ್ಯೋಗ ಕಡಿತಗಳು ಮುಂದುವರೆದಿವೆ. ಗೂಗಲ್, ಮೆಟಾ, ಅಮೆಜಾನ್ ಸೇರಿದಂತೆ 570 ಟೆಕ್ ಕಂಪನಿಗಳು 2023 ರಲ್ಲಿ 1,68,918 ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್‌ಗಳನ್ನು ನೀಡಿವೆ. ಅಮೆರಿಕ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಈಗಾಗಲೇ ಹಲವಾರು ಮಂದಿಯನ್ನು ಹೊರಹಾಕಲಾಗಿದೆ. ಆದರೆ ಯುರೋಪಿನಲ್ಲಿನ ಜನರನ್ನು ಹೊರಹಾಕಲು ಸಾಧ್ಯವಾಗದೇ ದೈತ್ಯಕಂಪನಿಗಳು ಹೆಣಗಾಡುತ್ತಿವೆ.

ಹೀಗಾಗಿ ಯುರೋಪಿನಲ್ಲಿ ತಮ್ಮ ಉದ್ಯೋಗಿಗಳ ಸಂಖ್ಯೆ ಕಡಿಮೆಮಾಡಲು ದೈತ್ಯ ಕಂಪನಿಗಳು ಯೋಚಿಸುತ್ತಿದ್ದು ಹೊಸ ಮಾರ್ಗವೊಂದರ ಮೂಲಕ ಉದ್ಯೋಗಿಗಳಿಗೆ ರಾಜೀನಾಮೆ ನೀಡಲು ಒತ್ತಾಯ ಮಾಡುತ್ತಿವೆ.

ಯುರೋಪಿನಲ್ಲಿ ಬಿಗಿಯಾದ ಕಾರ್ಮಿಕ ನಿಯಮಗಳಿವೆ. ಉದ್ಯೋಗಿ ಹಿತಾಸಕ್ತಿ ಗುಂಪುಗಳೊಂದಿಗೆ ಪೂರ್ವ ಸಮಾಲೋಚನೆಯಿಲ್ಲದೆ ಕೆಲ ಯುರೋಪಿಯನ್‌ ದೇಶಗಳಲ್ಲಿ ವಜಾ ಮಾಡುವಂತೆಯೂ ಇಲ್ಲ. ಕಾನೂನಿನ ಪ್ರಕಾರ ಕಂಪನಿಗಳು ವಜಾಗೊಳಿಸುವ ಮೊದಲು ಈ ಕೌನ್ಸಿಲ್‌ಗಳೊಂದಿಗೆ ಸಮಾಲೋಚಿಸಲು ಕಾನೂನುಬದ್ಧ ನಿಯಮವಿದ್ದು ಕಂಪನಿಗಳು ಇದಕ್ಕೆ ಬದ್ಧವಾಗಿರಬೇಕಾಗುತ್ತದೆ.

ಹೀಗಾಗಿ ದೈತ್ಯಕಂಪನಿಗಳು ತಮ್ಮಲ್ಲಿನ ಉದ್ಯೋಗಿಗಳಿಗೆ 1 ವರ್ಷಕ್ಕೂ ಹೆಚ್ಚಿನ ಸಂಬಳವನ್ನು ವಜಾ ಕೊಡುಗೆಯಾಗಿ ನೀಡುವ ಆಮಿಶವೊಡ್ಡುತ್ತಿವೆ. ರಾಜೀನಾಮೆ ನೀಡಬಯಸುವವರಿಗೆ ಹೆಚ್ಚಿನ ವಜಾ ಕೊಡುಗೆ ನೀಡಲಾಗುತ್ತೆ ಎಂದೆಲ್ಲ ಆಮಿಶವೊಡ್ಡಿ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗುತ್ತಿದೆ.

ಲಭ್ಯವಿರೋ ಮಾಹಿತಿಯ ಪ್ರಕಾರ, ಫ್ರಾನ್ಸ್‌ನಲ್ಲಿ, ಗೂಗಲ್‌ನ ಮಾತೃಸಂಸ್ಥೆ ಆಲ್ಫಾಬೆಟ್ ಉದ್ಯೋಗಿಗಳನ್ನು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡುವಂತೆ ಕೇಳಿಕೊಂಡಿದೆ ಮತ್ತು ಪ್ರತಿಯಾಗಿ ಉತ್ತಮ ಬೇರ್ಪಡಿಕೆ ಪ್ಯಾಕೇಜ್‌ಗಳನ್ನು ನೀಡುವುದಾಗಿ ಹೇಳಿದೆ. 5-8 ವರ್ಷಗಳ ಅನುಭವವಿರುವ ಕೆಲವು ಹಿರಿಯ ವ್ಯವಸ್ಥಾಪಕರು ಸ್ವಯಂಪ್ರೇರಣೆಯಿಂದ ರಾಜೀನಾಮೆ ನೀಡಿದರೆ ಅವರಿಗೆ ಒಂದು ವರ್ಷದ ವೇತನದ ಬೇರ್ಪಡಿಕೆ ಪ್ಯಾಕೇಜ್ ಅನ್ನು Amazon ನೀಡುವುದಾಗಿ ಘೋಷಿಸಿದೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!