ಮಲಯಾಳಂನ ಮೊದಲ ಮಹಿಳಾ ನಟಿ ಪಿಕೆ ರೋಸಿ : ಡೂಡಲ್‌ ಮೂಲಕ 120ನೇ ಜನ್ಮವಾರ್ಷಿಕೋತ್ಸವ ಆಚರಿಸಿದ ಗೂಗಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಮಲಯಾಳಂ ಚಿತ್ರರಂಗದ ಮೊದಲ ಮಹಿಳಾ ನಟಿ ಪಿಕೆ ರೋಸಿ ಅವರ 120 ನೇ ಜನ್ಮ ವಾರ್ಷಿಕೋತ್ಸವದ ಪ್ರಯುಕ್ತ ಡೂಡಲ್‌ ಮೂಲಕ ಗೂಗಲ್ ಇಂದು ಗೌರವ ಸಲ್ಲಿಸಿದೆ.

1903 ಫೆಬ್ರವರಿ 10ರಂದು ರೋಸಿ ಅವರು ಕೇರಳದ ತಿರುವನಂತಪುರದಲ್ಲಿ ಜನಿಸಿದರು. ಅವರ ಮೂಲ ಹೆಸರು ರಾಜಮ್ಮ. ಸಿನಿಮಾಗಾಗಿ ಅವರು ತಮ್ಮ ಹೆಸರನ್ನು ರೋಸಿ ಎಂದು ಬದಲಾಯಿಸಿಕೊಂಡರು. ರೋಸಿಯವರಿಗೆ ಚಿಕ್ಕವಯಸ್ಸಿನಲ್ಲಿಯೇ ನಟನೆಯಲ್ಲಿ ಉತ್ಸಾಹವಿತ್ತು. ‘ವಿಗಥಕುಮಾರನ್’ ಅವರು ನಟಿಸಿದ ಮೊದಲ ಸಿನಿಮಾ. ಜೆಸಿ ಡ್ಯಾನಿಯಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಯಿತು.

ಸಮಾಜದ ಅನೇಕ ವಿಭಾಗಗಳಲ್ಲಿ, ವಿಶೇಷವಾಗಿ ಮಹಿಳೆಯರಿಗೆ ಅವಕಾಶಗಳು ಸಿಗುತ್ತಿರಲಿಲ್ಲ. ಆದರೆ ರೋಸಿ ಅವರು ತಮ್ಮ ಪಾತ್ರದ ಮೂಲಕ ಅಡೆತಡೆಗಳನ್ನು ಮುರಿದರು. ಅವರ ಕೆಲಸಕ್ಕೆ ಮನ್ನಣೆ ಸಿಗಲೇ ಇಲ್ಲ. ಅವರ ಕಥೆ ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿ’ ಎಂದು ಗೂಗಲ್ ಹೇಳಿದೆ.

ತನ್ನ ಜೀವಿತಾವಧಿಯಲ್ಲಿ ಅವರು ಎಂದಿಗೂ ತನ್ನ ಕೆಲಸಕ್ಕೆ ಮನ್ನಣೆಯನ್ನು ಪಡೆಯದಿದ್ದರೂ, ರೋಸಿಯ ಕಥೆಯು ಮಾಧ್ಯಮದಲ್ಲಿ ಪ್ರಾತಿನಿಧ್ಯದ ಕುರಿತು ಸಂಭಾಷಣೆಗಳಿಗೆ ಸಂಬಂಧಿಸಿದೆ. ಇಂದು ಅವರ ಕಥೆ ಅನೇಕರಿಗೆ ಪ್ರೇರಣೆ ಮತ್ತು ಸ್ಫೂರ್ತಿಯಾಗಿ ಕಾರ್ಯನಿರ್ವಹಿಸುತ್ತದೆ.

ಗೂಗಲ್ ಡೂಡಲ್​ನಲ್ಲಿ ರೋಸಿ ಅವರ ಫೋಟೋ ಇದೆ. ಅವರ ಹಿಂದೆ ಸಿನಿಮಾ ರೀಲ್ ಇದೆ. ಅವರ ಸುತ್ತಲೂ ಗುಲಾಬಿ ಹೂಗಳು ಇವೆ. ಈ​ ಡೂಡಲ್​ನಿಂದ ಅನೇಕರಿಗೆ ನಟಿಯ ಸಾಧನೆ ಬಗ್ಗೆ ತಿಳಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!