ಭಾರತದ ಪ್ಲೇ ಸ್ಟೋರ್‌ ನಿಂದ 2,000 ಸಾವಿರ ಸಾಲದ ಅಪ್ಲಿಕೇಷನ್‌ ತೆಗೆದುಹಾಕಿದೆ ಗೂಗಲ್‌ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಜಾಗತಿಕ ಟೆಕ್‌ ದಿಗ್ಗಜ ಗೂಗಲ್‌ ಭಾರತದ ಪ್ಲೇ ಸ್ಟೋರ್‌ ನಿಂದ 2,000 ಸಾಲದ ಅಪ್ಲಿಕೇಷನ್‌ ಗಳನ್ನು ತೆಗೆದು ಹಾಕಿದೆ ಎಂದು ಹೇಳಿದೆ. ನಿಯಮಗಳ ಉಲ್ಲಂಘನೆ, ತಪ್ಪು ಮಾಹಿತಿ ಮತ್ತು ಪ್ರಶ್ನಾರ್ಹ ಆಫ್‌ಲೈನ್ ನಡವಳಿಕೆಗಾಗಿ ಅವುಗಳನ್ನು ಭಾರತದ ಪ್ಲೇ ಸ್ಟೋರ್‌ ನಿಂದ ತೆಗೆದುಹಾಕಲಾಗಿದೆ.

ಇತ್ತೀಚೆಗೆ ಸಂಶಯಾಸ್ಪದ ಚಟುವಟಿಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ತನ್ನ ಸೆಕ್ಯುರಿಟಿ ವಿಧಾನಗಳನ್ನು ಮತ್ತಷ್ಟು ಬಲಪಡಿಸಲು ಚಿಂತಿಸುತ್ತಿದೆ. ಮುಂಬರುವ ವಾರಗಳಲ್ಲಿ ಪ್ಲೇ ಸ್ಟೋರ್‌ ನಲ್ಲಿ ಹೆಚ್ಚಿನ ಪರಿಶೀಲನಾ ವ್ಯವಸ್ಥೆಗಳನ್ನು ಅಳವಡಿಸುವುದಾಗಿ ಹೇಳಿದೆ. ಅಲ್ಲದೇ ಸಂಶಯಾಸ್ಪದ ಚಟುವಟಿಕೆಗಳನ್ನು ಮಾಡುವವರಿಗೆ ದಂಡ ವಿಧಿಸಲು ಸರ್ಕಾರಿ ಸಂಸ್ಥೆಗಳು, ಮಾಧ್ಯಮ ಮತ್ತು ಬಳಕೆದಾರರ ಉಲ್ಲೇಖಗಳೊಂದಿಗೆ ಕೆಲಸ ಮಾಡುವುದಾಗಿ ಹೇಳಿದೆ.

ಈ ಕುರಿತು ಕಂಪನಿಯ ವಾರ್ಷಿಕ ‘ಸೇಫರ್ ವಿತ್ ಗೂಗಲ್’ ಈವೆಂಟ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೂಗಲ್ ಏಷ್ಯಾ ಪೆಸಿಫಿಕ್ ಪ್ರದೇಶದ ಟ್ರಸ್ಟ್ ಮತ್ತು ಸುರಕ್ಷತೆಯ ಹಿರಿಯ ನಿರ್ದೇಶಕ ಮತ್ತು ಮುಖ್ಯಸ್ಥ ಸೈಕತ್ ಮಿತ್ರಾ “ನಾವು ಜನವರಿಯಿಂದ ಇಲ್ಲಿಯವರೆಗೆ ಇಂಡಿಯಾ ಪ್ಲೇ ಸ್ಟೋರ್‌ನಿಂದ 2,000-ಕ್ಕೂ ಹೆಚ್ಚು ಸಾಲದ ಅಪ್ಲಿಕೇಶನ್‌ಗಳನ್ನು ತೆಗೆದುಹಾಕಿದ್ದೇವೆ” ಎಂದು ಹೇಳಿದರು. ನೀತಿಯ ಉಲ್ಲಂಘನೆ, ಬಹಿರಂಗಪಡಿಸುವಿಕೆಯ ಕೊರತೆ ಮತ್ತು ತಪ್ಪು ಮಾಹಿತಿಯನ್ನು ಆಧರಿಸಿ ಅವುಗಳನ್ನು ತೆಗೆದುಹಾಕಲಾಗಿದೆ ಎಂದು ಅವರು ಹೇಳಿರುವುದನ್ನು ಮೂಲಗಳು ಉಲ್ಲೇಖಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!