ಐದೇ ಐದು ನಿಮಿಷದಲ್ಲಿ ಮಾಡಿ ನೋಡಿ ಶೇಜ್‌ವಾನಿ ಫ್ರೈಡ್‌ ರೈಸ್…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೇಕಾಗುವ ಸಾಮಗ್ರಿಗಳು:

ಒಂದು ಕಪ್‌ ಅನ್ನ
ಅರ್ಧ ಕಪ್‌ ಕ್ಯಾರೆಟ್‌, ಈರುಳ್ಳಿ
ಅರ್ಧ ಕಪ್‌ ಬೀನ್ಸ್‌
ಅರ್ಧ ಕಪ್‌ ಕ್ಯಾಪ್ಸಿಕಂ
ಅರ್ಧ ಕಪ್‌ ಸ್ವೀಟ್‌ ಕಾರ್ನ್(ನಿಮ್ಮಿಷ್ಟದ ತರಕಾರಿ)
ಒಂದು ಪ್ಯಾಕೆಟ್ ಶೇಜ್‌ವಾನಿ ಮಸಾಲಾ‌
ಎಣ್ಣೆ

ಮಾಡುವ ವಿಧಾನ:

ಒಲೆ ಮೇಲೆ ಒಂದು ಪಾತ್ರೆ ಅಥವಾ ಬಾಣಲೆ ಇಟ್ಟು ಎಣ್ಣೆ ಹಾಕಿ ಬಿಸಿಯಾದ ಬಳಿಕ ಅದಕ್ಕೆ ಈರುಳ್ಳಿ ಹಾಕಿ ಒಂದು ನಿಮಿಷ ಸಾಟ್‌ ಮಾಡಿ. ನಂತಯರ ಅದಕ್ಕೆ ಹೆಚ್ಚಿಟ್ಟುಕೊಂಡ ಎಲ್ಲಾ ತರಕಾರಿಗಳನ್ನು ಒಂದೊಂದಾಗಿಯೇ ಹಾಕಿ ಎರಡು ನಿಮಿಷ ಹುರಿಯಿರಿ(ನೀರು ಹಾಕುವಂತಿಲ್ಲ, ಎಣ್ಣೆಯಲ್ಲಿಯೇ ಬೇಯಬೇಕು) ಫ್ರೈಡ್‌ ರೈಸ್‌ಗೆ ಬೇಯಿಸಿದಷ್ಟು ಅರ್ಧಂಬರ್ಧ ಬೆಂದರೆ ಸಾಕು. ನಂತರ ಸ್ವೀಟ್‌ ಕಾರ್ನ್‌ ಹಾಕಿ ಒಂದು ನಿಮಿಷ ದೊಡ್ಡ ಉರಿಯಲ್ಲೇ ಎಲ್ಲವೂ ಬೇಯಬೇಕು. ನಂತರ ಮಾಡಿಟ್ಟುಕೊಂಡ ಪುಡಿ ಪುಡಿಯಾಗಿರುವ ಅನ್ನವನ್ನು ಹಾಕಿ ಕಲಸಿ ಕೊನೆಗೆ ಶೇಜ್‌ವಾನಿ ಮಸಾಲಾ ಹಾಕಿ ಮಿಕ್ಸ್‌ ಮಾಡಿ (ಇದರಲ್ಲಿಯೇ ಉಪ್ಪು, ಖಾರ ಎಲ್ಲವೂ ಇರುತ್ತದೆ) ಬೇಕಾದರೆ ಕೊನೆಯಲ್ಲಿ ಕೊತ್ತಂಬರಿ ಸೊಪ್ಪು, ಸ್ಪ್ರಿಂಗ್‌ ಆನಿಯನ್ಸ್‌ ಹಾಕಿ ಗಾರ್ನಿಶ್‌ ಮಾಡಿ. ಟೊಮ್ಯಾಟೋ ಸಾಸ್‌, ರೆಡ್‌ ಚಿಲ್ಲಿ ಸಾಸ್‌ನೊಂದಿಗೆ ಬಹಳ ರುಚಿಯಾಗಿರುತ್ತದೆ. ಮಕ್ಕಳಿಗೆ ಇಷ್ಟವಾಗುವ ರೆಸಿಪಿ ಇದು ಒಮ್ಮೆ ಟ್ರೈ ಮಾಡಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!