‌ಗೂಗಲ್‌ ʼಹ್ಯೂಮನ್‌ ಎರರ್ʼ: ಹ್ಯಾಕರ್ ಗೆ ಸಂದಾಯವಾಯ್ತು 2 ಕೋಟಿ ರೂ.

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಇಂದಿನ ಆಧುನಿಕ ಇಂಟರ್ನೆಟ್‌ ಯುಗದಲ್ಲಿ ಕೆಲವೊಮ್ಮೆ ಅಂತರ್ಜಾಲ ದೋಷಗಳಾಗುವುದು ಸರ್ವೇ ಸಾಮಾನ್ಯ. ಹಾಗೆಂದೇ ದೊಡ್ಡ ದೊಡ್ಡ ಕಂಪನಿಗಳು ಎರರ್‌ ಕಂಡುಹಿಡಿಯಲು ತಂತ್ರಜ್ಞರ ತಂಡವನ್ನೇ ಇಟ್ಟಿರುತ್ತಾರೆ ಆದಾಗ್ಯೂ ಕೆಲವೊಮ್ಮೆ ದೋಷಗಳುಂಟಾಗುತ್ತದೆ. ಅದನ್ನೇ ಹ್ಯೂಮನ್‌ ಎರರ್‌ ಎನ್ನಲಾಗುತ್ತದೆ. ಈ ಹ್ಯೂಮನ್‌ ಎರರ್‌ ಕಂಪನಿಗೆ ಕೆಲವೊಮ್ಮೆ ಲಾಭವನ್ನೂ ಇನ್ನೂ ಕೆಲವೊಮ್ಮೆ ನಷ್ಟವನ್ನೂ ಉಂಟು ಮಡುತ್ತದೆ.

ಜಾಗತಿಕ ಟೆಕ್‌ ದಿಗ್ಗಜ ಗೂಗಲ್‌ ನಲ್ಲಿಯೂ ಕೂಡ ಇಂಥಹ ಹ್ಯೂಮನ್‌ ಎರರ್‌ ಗಳಾಗುತ್ತಿರುತ್ತವೆ. ಇತ್ತೀಚಿನ ಹ್ಯೂಮನ್‌ ಎರರ್‌ ಪ್ರಕರಣವೊಂದರಲ್ಲಿ ಗೂಗಲ್‌ ನಿಂದ ಸ್ವಯಂ ಘೋಷಿತ ಹ್ಯಾಕರ್‌ ಒಬ್ಬನಿಗೆ 250,000 ಡಾಲರ್‌ (ಸುಮಾರು 2 ಕೋಟಿ ರೂ.) ಹಣ ಸಂದಾಯವಾಗಿದೆ. ಈ ಕುರಿತು ಕಂಪನಿಯು ಮಾಹಿತಿ ಹೊರಹಾಕಿದ್ದು ‘ಮಾನವ ದೋಷ’ ದಿಂದಾಗಿ ಇದು ಸಂಭವಿಸಿದೆ ಎಂದು ಹೇಳಿದೆ.

ಹಣ ಪಡೆದ ಹ್ಯಾಕರ್‌ ಸ್ಯಾಮ್ ಕರ್ರಿ ತನಗೆ ಗೂಗಲ್‌ ನಿಂದ ಹಣ ಸಂದಾಯವಾಗಿದೆ ಎಂದು ಟ್ವೀಟರ್‌ ನಲ್ಲಿ ಹೇಳಿದ್ದಾರೆ. ನಂತರದ ಬೆಳವಣಿಗೆಯಲ್ಲಿ ದೋಷದ ಕುರಿತು ಗೂಗಲ್‌ ಮಾಹಿತಿ ನೀಡಿದೆ.
ಹಣವನ್ನು ಹಿಂದಕ್ಕೆ ತೆಗೆದುಕೊಳ್ಳುವ ಕುರಿತು ಗೂಗಲ್ ಹೀಗೆ ಪ್ರತಿಕ್ರಿಯಿಸಿದೆ. “ನಮ್ಮ ತಂಡವು ಇತ್ತೀಚೆಗೆ ಮಾನವ ದೋಷದ ಪರಿಣಾಮವಾಗಿ ತಪ್ಪು ಪಕ್ಷಕ್ಕೆ ಪಾವತಿ ಮಾಡಿದೆ. ಪ್ರಭಾವಿತ ಪಾಲುದಾರರಿಂದ ಅದನ್ನು ತ್ವರಿತವಾಗಿ ನಮಗೆ ತಿಳಿಸಲಾಗಿದೆ ಎಂದು ನಾವು ಪ್ರಶಂಸಿಸುತ್ತೇವೆ ಮತ್ತು ಅದನ್ನು ಸರಿಪಡಿಸಲು ನಾವು ಕೆಲಸ ಮಾಡುತ್ತಿದ್ದೇವೆ”

ಯುಗಾ ಲ್ಯಾಬ್ಸ್‌ನಲ್ಲಿ ಸ್ಟಾಫ್ ಸೆಕ್ಯುರಿಟಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಕರ್ರಿ ಅವರು ಸಾಂದರ್ಭಿಕವಾಗಿ ಗೂಗಲ್ ಮತ್ತು ಇತರ ಕಂಪನಿಗಳಿಗೆ ಬಗ್ ಬೌಂಟಿ ಬೇಟೆಯನ್ನು ಮಾಡುವ ಅರೆಕಾಲಿಕ ಕೆಲಸ ಮಾಡುತ್ತಿದ್ದಾರೆ. ಪ್ರಸ್ತುತ ಈ ಕುರಿತು ಕರ್ರಿ ಮತ್ತು ಗೂಗಲ್‌ ನಡುವೆ ಚರ್ಚೆಗಳಾಗುತ್ತಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!