ಗೂಗಲ್‌ ಟ್ರಾನ್ಸ್ ಲೇಟ್ ಸೇವೆಗೆ ಸಂಸ್ಕೃತ- ಕೊಂಕಣಿ- ಅಸ್ಸಾಮಿ ಸೇರಿ 8 ಭಾರತೀಯ ಭಾಷೆ ಸೇರ್ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಂತರ್ಜಾಲ ದೈತ್ಯ ಸಂಸ್ಥೆ ಗೂಗಲ್ ತನ್ನ ಭಾಷಾಂತರ (‌ಟ್ರಾನ್ಸ್ಲೇಟ್)‌ ಸೇವೆಗೆ ಎಂಟು ಭಾರತೀಯ ಭಾಷೆಗಳು ಸೇರಿದಂತೆ ಒಟ್ಟು 24 ಭಾಷೆಗಳನ್ನು ಹೊಸದಾಗಿ ಸೇರ್ಪಡೆಗೊಳಿಸಿದೆ.
ಗೂಗಲ್‌ ಸಂಸ್ಥೆಯು ಬೇರೆ ಭಾಷೆಯ ಪದಗಳನ್ನು ನೋಡುಗರು ತಮಗೆ ಅರ್ಥವಾಗುವ ಭಾಷೆಯಲ್ಲಿ ಅರ್ಥೈಸಿಕೊಳ್ಳಲು ಅನುವಾಗುವಂತೆ ಭಾಷಾಂತರ ಸೇವೆಯನ್ನು ನೀಡುತ್ತದೆ. ಇದೀಗ ಗೂಗಲ್‌ ಅನುವಾದ ಸೇವೆಗೆ ಭಾರತೀಯ ಭಾಷೆಗಳಾದ ಅಸ್ಸಾಮಿ, ಭೋಜ್‌ಪುರಿ, ಸಂಸ್ಕೃತ, ಕೊಂಕಣಿ, ಮೈಥಿಲಿ, ಮಿಜೋ ಮತ್ತು ಮೈಟೆಲಾನ್ (ಮಣಿಪುರಿ) ಭಾಷೆಗಳನ್ನು ಹೊಸದಾಗಿ ಸೇರ್ಪಡೆಗೊಳಿಸಲಾಗಿದ್ದು, ‌ ಒಟ್ಟಾರೆಯಾಗಿ 19 ಭಾರತೀಯ ಭಾಷೆಗಳಲ್ಲಿ ಗೂಗಲ್ ಭಾಷಾಂತರ ಸೇವೆ ಲಭ್ಯವಿದೆ.
ಭಾರತೀಯ ಭಾಷೆಗಳ ಭಾಷಾಂತರಗಳಿಗೆ ಸಂಬಂಧಿಸಿದಂತೆ ದೋಷಗಳನ್ನು ನಿವಾರಿಸಲು ಗೂಗಲ್ ಕೆಲಸ ಮಾಡುತ್ತಿದೆ. ಭಾಷಾಂತರದಲ್ಲಿ ನುಸುಳುವ ತಪ್ಪುಗಳನ್ನು ಸರಿಪಡಿಸಿ, ಭಾಷಾಂತರವನ್ನು ಇನ್ನಷ್ಟು ಸ್ಪಷ್ಟ- ಸರಳವಾಗಿ ನೀಡಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಗೂಗಲ್‌ ಸಂಸ್ಥೆಯ ಸೀನಿಯರ್‌ ಸಾಫ್ಟ್‌ ವೇರ್‌ ಇಂಜಿನೀಯರ್ ಇಸಾಕ್ ಕ್ಯಾಸ್ವೆಲ್ ಹೇಳಿದ್ದಾರೆ.
ಗೂಗಲ್‌ ಟ್ರಾನ್ಸ್‌ಲೇಟ್‌ ಜಗತ್ತಿನಾದ್ಯಂತ ಒಟ್ಟು 133 ಭಾಷೆಗಳಿಗೆ ಭಾಷಾಂತರ ಸೇವೆಯನ್ನು ನೀಡುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!