ಎಂಟು ತಿಂಗಳ ಗರ್ಭಿಣಿ ಮಹಿಳೆಗೆ ಗೇಟ್ ಪಾಸ್ ಕೊಟ್ಟ ಗೂಗಲ್‌: ಹೃದಯ ಒಡೆದ ಅನುಭವ ಎಂದ ಉದ್ಯೋಗಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಆರ್ಥಿಕ ಬಿಕ್ಕಟ್ಟಿನಿಂದ ಇಂದು ಅನೇಕ ದೈತ್ಯ ಕಂಪೆನಿಗಳು ತತ್ತರಿಸಿದ್ದು, ಅನೇಕ ಉದ್ಯೋಗಿಗಳನ್ನು ಕೆಲಸದಿಂದ ವಜಾಗೊಳಿಸಿದೆ. ಆ ಸಾಲಿನಲ್ಲಿ ಗೂಗಲ್‌ ಕಂಪನಿಯು ಸೇರಿಕೊಂಡಿದೆ.

ಈ ರೀತಿ ವಜಾಗೊಂಡ ಅನೇಕ ನೌಕರರು ತಮ್ಮ ಬೇಸರವನ್ನು ಹೊರಹಾಕಿದ್ದು, ಅದೇ ರೀತಿ ಗೂಗಲ್‌ ಕಂಪನಿಯು (Google Layoff) ಎಂಟು ತಿಂಗಳ ಗರ್ಭಿಣಿಯನ್ನು ವಜಾಗೊಳಿಸಿದ್ದು, ಮಹಿಳೆಯು ಲಿಂಕ್ಡ್‌ಇನ್‌ನಲ್ಲಿ ನೋವು ತೋಡಿಕೊಂಡಿದ್ದಾರೆ.

ಗೂಗಲ್‌ ಕೆಲ ದಿನಗಳ ಹಿಂದಷ್ಟೇ ರಾತ್ರೋರಾತ್ರಿ ವಜಾಗೊಳಿಸಿದ 12 ಸಾವಿರ ಉದ್ಯೋಗಿಗಳಲ್ಲಿ ಗರ್ಭಿಣಿಯೂ ಒಬ್ಬರಾಗಿದ್ದಾರೆ. ಅವರು ಲಿಂಕ್ಡ್‌ಇನ್‌ನಲ್ಲಿ ವಜಾಗೊಂಡ ಕುರಿತು ಅಳಲು ತೋಡಿಕೊಂಡಿದ್ದಾರೆ.

“ಬೆಳಗಿನ ಜಾವ 3 ಗಂಟೆಗೆ ನಾನು ವಜಾಗೊಂಡಿರುವುದು ಗೊತ್ತಾಯಿತು. ಇದರಿಂದ ನನ್ನ ಹೃದಯವೇ ಒಡೆದಂತಾಯಿತು. ನನ್ನ ಕೈಗಳು ನಡುಗಲು ಆರಂಭಿಸಿದವು. ಇಂತಹ ಸಂದರ್ಭದಲ್ಲಿ ವಜಾ ಏಕೆ ಎಂಬ ಪ್ರಶ್ನೆಯನ್ನು ನನಗೆ ನಾನೇ ಕೇಳಿಕೊಂಡೆ ಎಂದು ಕ್ಯಾಲಿಫೋರ್ನಿಯಾ ಮೂಲದ ಪ್ರೋಗ್ರಾಂ ಮ್ಯಾನೇಜರ್‌ ಆಗಿರುವ ಕ್ಯಾಥೆರಿನ್‌ ವೋಂಗ್‌ ಅವರು ನೋವು ಹಂಚಿಕೊಂಡಿದ್ದಾರೆ.

ನಾನು ಎಂಟು ತಿಂಗಳ ಗರ್ಭಿಣಿಯಾದ ಕಾರಣ ಕೆಲವೇ ದಿನದಲ್ಲಿ ನನಗೆ ಹೆರಿಗೆ ರಜೆ ಸಿಗುವುದಿತ್ತು. ನಕಾರಾತ್ಮಕ ಚಿಂತನೆಗಳನ್ನು ನನ್ನ ತಲೆಯಲ್ಲಿ ಬಿಟ್ಟುಕೊಳ್ಳಬಾರದು ಎಂದಿದ್ದೆ. ಆದರೆ, ಕೆಲಸದಿಂದ ವಜಾಗೊಂಡಿರುವುದು ನೋಡಿ ತಡೆದುಕೊಳ್ಳಲು ಆಗಲಿಲ್ಲ. ನಾನು ನನ್ನ ಕಂಪನಿಯನ್ನು ತುಂಬ ಪ್ರೀತಿಸುತ್ತಿದ್ದೆ, ತಂಡವನ್ನು ಇಷ್ಟಪಡುತ್ತಿದ್ದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!