ಆಫೀಸ್ ಡ್ಯೂಟಿಗೆ ಕುತ್ತು ತರುತ್ತಿದೆ ಎಮ್ಮೆಗಳ ‘ಪರೇಡ್’: ಟ್ವಿಟರ್ ನಲ್ಲಿ ಅವಲತ್ತು ಕೊಂಡ ಟೆಕ್ಕಿಗಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸಿಲಿಕಾನ್‌ ಸಿಟಿ, ಐಟಿ-ಬಿಟಿ ನಗರ ಬೆಂಗಳೂರಿನ ರಸ್ತೆಗಳು ಮೊದಲೇ ಕಿಕ್ಕಿರಿದ ವಾಹನಗಳಿಂದ ನಿರಂತರ ಟ್ರಾಫಿಕ್ ಆಗುತ್ತಿದ್ದು, ಇದೀಗ ಇದರ ಜೊತೆಗೆ ಮತ್ತೊಂದು ಸಮಸ್ಯೆ ಎದುರಾಗಿದೆ.

ಅದೇನೆಂದರೆ ನಗರದಲ್ಲಿ ಎಮ್ಮೆಗಳ ಹಾವಳಿ ಹೆಚ್ಚಾಗಿದ್ದು, ಬೆಳಗ್ಗೆ ಮತ್ತು ಸಂಜೆ ವೇಳೆ ಪ್ರಮುಖ ರಸ್ತೆಗಳಲ್ಲಿ ಎಮ್ಮೆಗಳ ಸಂಚಾರ ಹೆಚ್ಚುತ್ತಿದ್ದು, ಐಟಿ-ಬಿಟಿ ಕಂಪನಿ ಉದ್ಯೋಗಿಗಳು ಕಂಗಾಲಾಗಿದ್ದಾರೆ. ಹೀಗಾಗಿ ಟೆಕ್ಕಿಗಳು (ಐಟಿ-ಬಿಟಿ ಕಂಪನಿ ಉದ್ಯೋಗಿಗಳು) ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಬೆಳಗ್ಗಿನ ಹೊತ್ತಲ್ಲಿ ಎಮ್ಮೆಗಳ ಹಿಂಡು ರಸ್ತೆಯಲ್ಲೇ ಇರುತ್ತವೆ.ಇದರಿಂದ ನಿತ್ಯವೂ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ.

ಆಫೀಸ್ ದಾರಿಯಲ್ಲಿ ಸರತಿ ಸಾಲಿನಲ್ಲಿ ಎಮ್ಮೆಗಳು ನಿಧಾನವಾಗಿ ಚಲಿಸುವುದರಿಂದ ಬೇಗನೆ ಆಫೀಸ್​ಗೆ ತಲುಪಲು ಸಾಧ್ಯವಾಗುತ್ತಿಲ್ಲ. ಇದರಿಂದ ನಿತ್ಯ ನಗರದ ಕಸವನಹಳ್ಳಿ ರೋಡ್​ನಲ್ಲಿ 30-45 ನಿಮಿಷ ಟ್ರಾಫಿಕ್ ಜ್ಯಾಮ್ ಉಂಟಾಗುತ್ತಿದೆ ಎಂದು ಟೆಕ್ಕಿಗಳು ಪೊಲೀಸರಿಗೆ ಟ್ವೀಟ್ ಮೂಲ ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

 

ಕೆಲವೊಮ್ಮೆ ರಸ್ತೆಯಲ್ಲಿ ಅಡ್ಡ ನಿಂತರೆ ಜಪ್ಪಯ್ಯ ಎಂದರೂ ಜರುಗುವುದಿಲ್ಲ. ಐಟಿ ಕಂಪನಿಗಳು ಕೇಂದ್ರೀಕೃತ ಆಗಿರುವ ವೈಟ್‌ಫೀಲ್ಡ್‌, ಬೆಳ್ಳಂದೂರು ಮತ್ತು ಕಸವನಹಳ್ಳಿ ಸೇರಿದಂತೆ ವಿವಿಧೆಡೆ ಎಮ್ಮೆಗಳನ್ನು ರಸ್ತೆಗೆ ಬಿಡಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಟೆಕ್ಕಿಗಳು ಟೀಟ್ವರ್​ನಲ್ಲಿ ಪಶುಸಂಗೋಪನಾ ಇಲಾಖೆ, ಟ್ರಾಫಿಕ್ ಪೋಲಿಸ್, ಬಿಬಿಎಂಪಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!