ಹೊಸದಿಗಂತ ಡಿಜಿಟಲ್ ಡೆಸ್ಕ್:
ಚಾಟ್‌ಜಿಪಿಟಿ (ChatGPT) ಯಂತಹ ಕೃತಕ ಬುದ್ಧಿಮತ್ತೆ (AI) ಸಾಧನಗಳು ಇದೀಗ ಭಾರೀ ಜನಪ್ರಿಯತೆ ಗಳಿಸುತ್ತಿದ್ದು ಜನರು ಮುಂದಿನ ದಿನಗಳಲ್ಲಿ ಪ್ರಸ್ತುತ ಜನಪ್ರಿಯವಾಗಿರುವ ಗೂಗಲ್ ಕ್ರೋಮ್ ನಂತಹ ತಂತ್ರಜ್ಞಾನಗಳಿಂದ ದೂರವಾಗುವ ಭಯ ಎದುರಾಗಿರುವುದರಿಂದ ಗೂಗಲ್ ಇಂಕ್ ಇದೀಗ ತನ್ನ ಅಪ್ಲಿಕೇಷನ್ ಗಳಲ್ಲಿ ಎಐ ಟೂಲ್ ಗಳನ್ನು ಅಳವಡಿಸುತ್ತಿದೆ.
ಪ್ರಸ್ತುತ Gmail ಮತ್ತು Google ಡಾಕ್ಸ್‌ಗಾಗಿ ಸಂಯೋಜಿತ AI ಪರಿಕರಗಳನ್ನು Google ಪರಿಚಯಿಸುತ್ತಿದ್ದು ಈ ಕುರಿತಾಗಿ ಸಾವರ್ಜನಿಕ ಪರೀಕ್ಷೆಯನ್ನು ಪ್ರಾರಂಭಿಸಿರುವುದಾಗಿ ತನ್ನ Google Workspace ಬಳಕೆದಾರರಿಗೆ ತಿಳಿಸಿದೆ.
9to5 Google ನ ವರದಿಯ ಪ್ರಕಾರ, Google ತನ್ನ ಹೊಸ AI- ಚಾಲಿತ ವೈಶಿಷ್ಟ್ಯಗಳಿಗಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ವಿಶ್ವಾಸಾರ್ಹ ಪರೀಕ್ಷಾ ಕಾರ್ಯಕ್ರಮವನ್ನು ಪ್ರಾರಂಭಿಸಿದೆ. ಉದ್ಯಮಗಳು, ಶಿಕ್ಷಣ ಬಳಕೆದಾರರು ಮತ್ತು 18 ವರ್ಷ ಮೇಲ್ಪಟ್ಟ ಗ್ರಾಹಕರ ಸಣ್ಣ ಗುಂಪೊಂದನ್ನು ಪರೀಕ್ಷೆಗಾಗಿ ಆಹ್ವಾನಿಸಿದೆ. ಸಾರ್ವಜನಿಕ ಪರೀಕ್ಷೆಯ ಭಾಗವಾಗಿ, ಇಮೇಲ್‌ಗಳು, ಹುಟ್ಟುಹಬ್ಬದ ಆಮಂತ್ರಣಗಳು, ಸೃಜನಾತ್ಮಕ ಬರವಣಿಗೆ ಮುಂತಾದ ವಿಷಯಗಳಲ್ಲಿ AI ಟೂಲ್ ಗಳ ಬಳಕೆಯನ್ನು ಒಳಗೊಂಡಿದೆ. ಜೀಮೇಲ್ ಪರೀಕ್ಷೆಯನ್ನು Gmail Android ಪ್ಲಾಟ್‌ಫಾರ್ಮ್‌ನಲ್ಲಿ ನಡೆಸಲಾಗುತ್ತಿದೆ.