Wednesday, February 1, 2023

Latest Posts

ಜಪಾನ್‍ ಜನತೆಗೆ ಸರಕಾರದಿಂದ ಆಫರ್: ಮಕ್ಕಳನ್ನು ಪಡೆಯಿರಿ, ಶಿಶುಪಾಲನೆಗಾಗಿ ಅಧಿಕ ಹಣ ನೀಡುತ್ತೇವೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಪಾನ್‍ನ ಜನತೆಗೆ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವಾಲಯವು ಮಹತ್ವದ ಆಫರ್ ನೀಡಿದೆ.

ದೇಶದಲ್ಲಿ ಜನನ ಪ್ರಮಾಣ ಗಣನೀಯವಾಗಿ ಇಳಿಮುಖ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಜನರು ಮಗುವನ್ನ ಮಾಡಿಕೊಂಡರೆ ಈಗಾಗಲೇ ನೀಡುತ್ತಿರುವ ಹಣಕ್ಕಿಂತಲೂ 48 ಸಾವಿರ ರೂ. ಅಧಿಕ ನೀಡುವುದಾಗಿ ತಿಳಿಸಿದೆ.

ಮಗುವಿನ ಜನನದ ನಂತರ ಪೋಷಕರಿಗೆ ಹೆರಿಗೆ ಮತ್ತು ಶಿಶುಪಾಲನೆಗಾಗಿ ಒಟ್ಟು 420,000 ಯೆನ್‍ಗಳ (2,52,338 ರೂ.) ಅನುದಾನವನ್ನು ನೀಡುತ್ತಿದೆ. ಇದೀಗ ಆರೋಗ್ಯ, ಕಾರ್ಮಿಕ ಮತ್ತು ಕಲ್ಯಾಣ ಸಚಿವ ಕ್ಯಾಟೊ ಕಟ್ಸುನೋಬು, ಮಗು ಜನನದ ನಂತರ ನೀಡಲಾಗುವ ಹಣವನ್ನು ಹೆಚ್ಚಿಸಲು ನಿರ್ಧರಿಸಿದ್ದು, ಆ ಸಂಖ್ಯೆಯನ್ನು 5,00,000 ಯೆನ್‍ಗೆ (3,00,402 ರೂ.) ಹೆಚ್ಚಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಅವರೊಂದಿಗೆ ಚರ್ಚಿಸಿದ್ದು 2023ರ ಆರ್ಥಿಕ ವರ್ಷಕ್ಕೆ ಈ ನಿರ್ಧಾರ ಅಂಗೀಕರಿಸುವ ಸಾಧ್ಯತೆಯಿದೆ.

2021ರಲ್ಲಿ ಬಿಡುಗಡೆಯಾದ ಸರ್ಕಾರಿ ಅಂಕಿ ಅಂಶಗಳ ಪ್ರಕಾರ, ಜಪಾನ್‍ನಲ್ಲಿ ಜನನದ ದರಕ್ಕಿಂತ ಸಾವಿನ ದರವೇ ಹೆಚ್ಚಿದೆ. ದೇಶದಲ್ಲಿ ಕಳೆದ ವರ್ಷ 8,11,604 ಜನನವಾಗಿದ್ದರೆ, 14,39,809 ಸಾವು ದಾಖಲಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!