ಕಾಂತಾರದಲ್ಲಿ ನಾನು ಕೂಡಾ ನಟಿಸಬೇಕಿತ್ತು: ಸೌತ್ ನಟ ಪೃಥ್ವಿರಾಜ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂತಾರ ಸಿನಿಮಾ ವಿಶ್ವದಲ್ಲೇ ಮೋಡಿ ಮಾಡಿದ್ದೂ, ಅಲ್ಲದೆ ಅನೇಕ ಸಿನಿ ರಂಗದವರು ಕೂಡ ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಸೌತ್ ನಟ ಪೃಥ್ವಿರಾಜ್ ಸುಕುಮಾರ್ ಕೂಡ ಒಬ್ಬರು.
ಈಗಾಗಲೇ ಪೃಥ್ವಿರಾಜ್ ಮುಕ್ತವಾಗಿ ಕಾಂತಾರ ಸಿನಿಮಾವನ್ನು ಹೊಗಳಿದ್ದಾರೆ. ಇದೀಗ ಮತ್ತೊಮ್ಮೆ ಸಿನಿಮಾ ಕುರಿತು ಮಾತನಾಡಿದ್ದು, 2022ರಲ್ಲಿ ಎಲ್ಲಾ ಇಂಡಸ್ಟ್ರಿಗಳಲ್ಲಿಯೂ ಒಳ್ಳೊಳ್ಳೆಯ ಸಿನಿಮಾಗಳು ಬಂದಿವೆ. ಆದರೆ ನನ್ನನ್ನು ಹೆಚ್ಚು ಕಾಡಿದ್ದು ಕಾಂತಾರ ಸಿನಿಮಾ ಎಂದಿದ್ದಾರೆ.
ಈ ಸಿನಿಮಾ ಮಲಯಾಳಂನಲ್ಲಿ ಬಂದಿರಬೇಕಿತ್ತು. ನಾನು ಕೂಡಾ ಅದರಲ್ಲಿ ನಟಿಸಿರನಬೇಕಿತ್ತು ಎನಿಸಿತು ಎಂದಿದ್ದಾರೆ.
ಕಾಂತಾರ ಸಿನಿಮಾ ಸದ್ಯ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿ ಬಾಕ್ಸ್ ಆಫೀಸ್ ದಾಖಲೆ ಮಾಡುತ್ತಿದೆ. ಹಿಂದಿಯಲ್ಲಿ 75 ಕೋಟಿಗೂ ಹೆಚ್ಚು ಗಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!