ರಾಜ್ಯಾದ್ಯಂತ ಇಂದಿನಿಂದ ಸರ್ಕಾರಿ ಶಾಲೆಗಳು ಮತ್ತೆ ಶುರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಇಂದಿನಿಂದ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳು ಮತ್ತೆ ಆರಂಭವಾಗಲಿದೆ. ಬೇಸಿಗೆ ರಜೆ ಮುಗಿದ ಬಳಿಕ 2023-24ರ ಶೈಕ್ಷಣಿಕ ವರ್ಷ ಪ್ರಾರಂಭವಾಗುತ್ತಿದೆ. ಮೇ 29ರಂದೇ ಶಾಲೆಗಳಲ್ಲಿ ಚಟುವಟಿಕೆಗಳು ಶುರುವಾಗಿದ್ದು, ಮೇ 31 ರಿಂದ ಅಧಿಕೃತವಾಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ತೆರೆಯಲಿವೆ. ಮಕ್ಕಳನ್ನು ಸ್ವಾಗತಿಸಲು ಶಿಕ್ಷಕರು ಮತ್ತು ಸಿಬ್ಬಂದಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಸಜ್ಜಾಗಿದ್ದಾರೆ.

ಇಲಾಖೆಯ ಸೂಚನೆಯಂತೆ ಶಾಲಾ ಪ್ರಾರಂಭಕ್ಕೆ ಎಲ್ಲ ಶಾಲೆಗಳಲ್ಲೂ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎರಡು ದಿನಗಳ ಕಾಲ ಶಾಲೆಯ ಪ್ರತಿಯೊಂದು ಕೊಠಡಿ, ಶೌಚಾಲಯ, ಆವರಣ ಸೇರಿದಂತೆ ಶಾಲೆ ಸುತ್ತಮುತ್ತ ಎಲ್ಲವನ್ನೂ ಸ್ವಚ್ಛಗೊಳಿಸಲಾಗಿದೆ. ಎರಡು ತಿಂಗಳ ಬೇಸಿಗೆ ರಜೆ ಬಳಿಕ ಮರಳಿ ಶಾಲೆಗೆ ಬರುತ್ತಿರುವ ಮಕ್ಕಳನ್ನು ಸ್ವಾಗತಿಸಲು ಶಾಲೆಯನ್ನು ಸಿಂಗರಿಸಲಾಗಿದೆ. ಮಕ್ಕಳ ಸ್ವಾಗತಕ್ಕೆ ಶಿಕ್ಷಕರು ಸಿದ್ಧರಾಗಿದ್ದಾರೆ.

ಬಿಸಿಯೂಟವನ್ನು ಮೊದಲ ದಿನದಿಂದಲೇ ಆರಂಭಿಸುವಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!