ಇಂಗ್ಲೆಂಡ್‌ನಲ್ಲಿ ಖಲಿಸ್ತಾನಿಗಳಿಂದ ತ್ರಿವರ್ಣಕ್ಕೆ ಅವಮಾನ: ಕಟು ಮಾತುಗಳಲ್ಲಿ ಎಚ್ಚರಿಸಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪ್ರತ್ಯೇಕತಾವಾದಿ ಅಮೃತಪಾಲ್ ಸಿಂಗ್ ಬಂಧಿಸಲು ಕೈಗೊಂಡಿರುವ ನಿರ್ಧಾರಗಳನ್ನು ವಿರೋಧಿಸಿ ಖಲಿಸ್ತಾನ್ ಸಹಾನುಭೂತಿಗಳು ಲಂಡನ್‌ನಲ್ಲಿರುವ ಭಾರತೀಯ ಹೈಕಮಿಷನ್‌ನಿಂದ ಭಾರತೀಯ ಧ್ವಜವನ್ನು ಕೆಳಗಿಳಿಸಿ ತ್ರಿವರ್ಣಕ್ಕೆ ಅವಮಾನ ಮಾಡಿದೆ. ಈ ಕುರಿತು ಭಾರತೀಯ ವಿದೇಶಾಂಗ ಸಚಿವಾಲಯ ನಿನ್ನೆ ಸಂಜೆ ನವದೆಹಲಿಯಲ್ಲಿ ಬ್ರಿಟನ್‌ನ ಹಿರಿಯ ರಾಜತಾಂತ್ರಿಕರನ್ನು ಕರೆಸಿ ಕಟು ಮಾತುಗಳಲ್ಲಿ ಎಚ್ಚರಿಸಿದೆ.

ಹೈಕಮಿಷನ್ ಆವರಣದಲ್ಲಿ ಭದ್ರತೆಯ ಅನುಪಸ್ಥಿತಿಗೆ ವಿವರಣೆ ನೀಡುವಂತೆ ಆದೇಶಿಸಿದ್ದು, ಜೊತೆಗೆ ಭಾರತೀಯ ರಾಜತಾಂತ್ರಿಕರು ಮತ್ತು ಸಿಬ್ಬಂದಿ ಬಗ್ಗೆ ಯುಕೆ ಸರ್ಕಾರದ “ಉದಾಸೀನತೆ ಸ್ವೀಕಾರಾರ್ಹವಲ್ಲ” ಎಂದು ಖಡಕ್ಕಾಗಿ ಉತ್ತರಿಸಿದೆ. ಯುಕೆ ಸರ್ಕಾರದಿಂದ ತಕ್ಷಣದ ಕ್ರಮಗಳನ್ನು ಭಾರತ ಒತ್ತಾಯಿಸಿದೆ. ಈ ಘಟನೆಯಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಗುರುತಿಸಿ ಬಂಧಿಸಲು ಮತ್ತು ಕಾನೂನು ಕ್ರಮ ಜರುಗಿಸಲು ಇಂಗ್ಲೆಂಡ್ ಸರ್ಕಾರವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಸಿದೆ.

ಯುನೈಟೆಡ್ ಕಿಂಗ್‌ಡಂನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿಯನ್ನು ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಖಂಡಿಸಿದ್ದಾರೆ. `ಇಂತಹ ಘಟನೆಗಳು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ, ಇಂತಹ ಅವಮಾನಕರ ಕೃತ್ಯಗಳನ್ನು ನಾನು ಖಂಡಿಸುತ್ತೇನೆ’ ಎಂದು ಟ್ವೀಟ್‌ ಮಾಡಿದ್ದಾರೆ.

 

 

ಏನಿದು ಘಟನೆ?

ಭಾರತದ ವಿರುದ್ಧ ಹೋರಾಡಿ ಎಲ್ಲಾ ಯುದ್ಧಗಳಲ್ಲಿ ಸೋಲುಂಡಿರುವ ಪಾಕಿಸ್ತಾನ ಭಾರತದೊಳಗೆ ಅಮೃತಪಾಲ್ ಸಿಂಗ್‌ನಂತಹ ಗೂಂಡಾಗಳನ್ನು ನೆಟ್ಟು ಭಾರತದಲ್ಲಿ ಅಶಾಂತಿ ಕದಡಲು ಪ್ರಯತ್ನಿಸುತ್ತಿದೆ. ಈ ಭಯೋತ್ಪಾಕನ ವಿರುದ್ಧ ಕೈಗೊಂಡಿರುವ ಕ್ರಮಗಳನ್ನು ವಿರೋಧಿಸಿ ನಿನ್ನೆ ಖಲಿಸ್ತಾನಿ ಶಕ್ತಿಗಳು ಇಂಗ್ಲೆಂಡ್‌ನ ಭಾರತೀಯ ಹೈಕಮಿಷನ್‌ನಲ್ಲಿ ತ್ರಿವರ್ಣವನ್ನು ಕೆಳಗಿಳಿಸುವ ಪ್ರಯತ್ನ ಮಾಡಿದರು. ಕೂಡಲೇ ಭಾರತೀಯ ಭದ್ರತಾ ಸಿಬ್ಬಂದಿ ಧ್ವಜ ಕೆಳಗಿಳಿಯದಂತೆ ರಕ್ಷಿಸಿದ್ದಾರೆ. ಖಲಿಸ್ತಾನಿ ಗೂಂಡಾಗಳು ಭಾರತ ಹೈಕಮಿಷನ್‌ ಕಚೇರಿಗೆ ಕಲ್ಲು ತೂರಾಟ ನಡೆಸಿ ಹಾನಿಗೊಳಿಸಿರುವುದೂ ವಿಡಿಯೋದಲ್ಲಿ ಕಂಡು ಬಂದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!