ಜಾಗಿಂಗ್ ವೇಳೆ ಗುದ್ದಿದ ಕಾರ್, ಟೆಕ್ ಕಂಪನಿ ಮಹಿಳಾ ಸಿಇಒ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಬೈನಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜಾಗಿಂಗ್ ಮಾಡುತ್ತಿದ್ದ ಮಹಿಳೆಗೆ ಏಕಾಏಕಿ ಹಿಂಬದಿಯಿಂದ ಬಂದ ಕಾರ್ ಗುದ್ದಿದ್ದು, ರಾಜಲಕ್ಷ್ಮಿ ಮೃತಪಟ್ಟಿದ್ದಾರೆ.

ಟೆಕ್ ಕಂಪನಿಯೊಂದರ ಸಿಇಒ ಆಗಿರುವ ರಾಜಲಕ್ಷ್ಮಿ ರಾಜಕೃಷ್ಣನ್ ಜಾಗರ್ ಹಾಗೂ ಫಿಟ್ನೆಸ್‌ಗೆ ಹೆಚ್ಚಿನ ಒತ್ತು ಕೊಡುತ್ತಿದ್ದರು. ನಿತ್ಯದಂತೆ ಜಾಗಿಂಗ್ ಮಾಡುತ್ತಿದ್ದರು, ವರ್ಲಿ ಡೈರಿ ಪ್ರದೇಶದಲ್ಲಿ ಜಾಗಿಂಗ್ ಮಾಡುವಾಗ ಹಿಂಬದಿಯಿಂದ ಕಾರು ಗುದ್ದಿದೆ, ಗಾಳಿಯಲ್ಲಿ ಹಾರಿ ಅವರು ಕೆಳಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಸುಮೇರ್‌ನನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!