September 14, 2026
Monday, September 14, 2026
spot_img

ಹೊಟೇಲ್ ಉದ್ಯಮಕ್ಕೆ ಸರ್ಕಾರದಿಂದ ‘ಗ್ಯಾಸ್’ ಭಾಗ್ಯ: ವಾಣಿಜ್ಯ ಎಲ್‌ಪಿಜಿ ಪೂರೈಕೆ ಶೇ. 50ಕ್ಕೆ ಏರಿಕೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶಾದ್ಯಂತ ಎದುರಾಗಿದ್ದ ಅನಿಲ ಬಿಕ್ಕಟ್ಟು ಸದ್ಯ ತಿಳಿಯಾಗುತ್ತಿದ್ದು, ಕೇಂದ್ರ ಸರ್ಕಾರವು ವಾಣಿಜ್ಯ ಎಲ್‌ಪಿಜಿ ಪೂರೈಕೆಯನ್ನು ಶೇ. 50ಕ್ಕೆ ಹೆಚ್ಚಿಸಿದೆ. ಇದರಿಂದಾಗಿ ಕಳೆದ ಕೆಲವು ದಿನಗಳಿಂದ ಸಂಕಷ್ಟದಲ್ಲಿದ್ದ ಹೊಟೇಲ್, ರೆಸ್ಟೋರೆಂಟ್ ಮತ್ತು ಕೈಗಾರಿಕಾ ಕ್ಯಾಂಟೀನ್‌ಗಳಿಗೆ ದೊಡ್ಡ ಮಟ್ಟದ ಸಮಾಧಾನ ಸಿಕ್ಕಂತಾಗಿದೆ.

ಎಲ್‌ಪಿಜಿ ಬಿಕ್ಕಟ್ಟು ತಾರಕಕ್ಕೇರಿದಾಗ ಕಮರ್ಷಿಯಲ್ ಪೂರೈಕೆಯನ್ನು ಸಂಪೂರ್ಣ ಸ್ಥಗಿತಗೊಳಿಸಿ, ಕೇವಲ ಗೃಹಬಳಕೆಗೆ ಮಾತ್ರ ಆದ್ಯತೆ ನೀಡಲಾಗಿತ್ತು. ಪರಿಸ್ಥಿತಿ ಸುಧಾರಿಸಿದಂತೆ ಮೊದಲು ಶೇ. 20ರಷ್ಟು, ನಂತರ ಶೇ. 10ರಷ್ಟು ಹಾಗೂ ಇದೀಗ ಮತ್ತೆ ಶೇ. 20ರಷ್ಟು ಪೂರೈಕೆ ಹೆಚ್ಚಿಸುವ ಮೂಲಕ ಒಟ್ಟು ಬೇಡಿಕೆಯ ಶೇ. 50ರಷ್ಟು ಅನಿಲವನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.

ಎಲ್‌ಪಿಜಿ ಮೇಲಿನ ಅವಲಂಬನೆ ತಗ್ಗಿಸಲು ಸರ್ಕಾರವು ಹೊಟೇಲ್ ಮತ್ತು ವಾಣಿಜ್ಯ ಸಂಸ್ಥೆಗಳು ಪೈಪ್‌ಲೈನ್ ನೈಸರ್ಗಿಕ ಅನಿಲಕ್ಕೆ (PNG) ವರ್ಗಾವಣೆಗೊಳ್ಳುವಂತೆ ಪ್ರೋತ್ಸಾಹಿಸುತ್ತಿದೆ. ಆಸಕ್ತ ಸಂಸ್ಥೆಗಳು ತೈಲ ಕಂಪನಿಗಳೊಂದಿಗೆ ನೋಂದಾಯಿಸಿಕೊಳ್ಳಲು ಸೂಚಿಸಲಾಗಿದೆ.

ಸದ್ಯ ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಪೂರೈಕೆ ಸ್ಥಿರವಾಗಿದ್ದು, ಅನಗತ್ಯವಾಗಿ ಗ್ಯಾಸ್ ಕಾಯ್ದಿರಿಸುವ ಪ್ರವೃತ್ತಿ ಕಡಿಮೆಯಾಗಿದೆ. ಇದೇ ವೇಳೆ ಸಿಲಿಂಡರ್ ಅಕ್ರಮ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಸರ್ಕಾರ, ಮೇಲ್ವಿಚಾರಣೆಗಾಗಿ ಕಂಟ್ರೋಲ್ ರೂಮ್‌ಗಳನ್ನು ಸ್ಥಾಪಿಸಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !