August 26, 2026
Wednesday, August 26, 2026
spot_img

VIRAL | ಗವರ್ನರ್‌ಗಾಗಿ ರಸ್ತೆ ಬಂದ್‌ ಮಾಡಿದ್ದೀರಿ, ನನ್ನ ಹೆಂಡ್ತಿ ಪ್ರೆಗ್ನೆಂಟ್‌ ಆಸ್ಪತ್ರೆಗೆ ಹೇಗೆ ಹೋಗ್ಲಿ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನಲ್ಲಿ ರಾಜಕೀಯ ಗಣ್ಯರು, ವಿವಿಐಪಿಗಳಿಗಾಗಿ ಕೆಲವೊಮ್ಮೆ ರಸ್ತೆ ಸಂಚಾರ ಮಾರ್ಗಗಳಲ್ಲಿ ಬದಲಾವಣೆ, ಝೀರೋ ಟ್ರಾಫಿಕ್‌ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಆದರೆ ಇದರಿಂದ ಎಷ್ಟೋ ಮಂದಿಗೆ ಸಮಸ್ಯೆ ಆಗುತ್ತದೆ.

ಈ ಬಾರಿ ಕೂಡ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗಾಗಿ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಇದಕ್ಕಾಗಿ ಬೆಂಗಳೂರಿನ ಎಚ್‌ಎಎಲ್‌ ಓಲ್ಡ್‌ ಏರ್‌ಪೋರ್ಟ್‌ ರಸ್ತೆಯನ್ನು ಅರ್ಧಗಂಟೆಗಾಗಿ ಬ್ಲಾಕ್‌ ಮಾಡಲಾಗಿತ್ತು.

ಈ ವೇಳೆ ವ್ಯಕ್ತಿಯೊಬ್ಬರು ಕಾರ್‌ನಿಂದ ಇಳಿದು ಪೊಲೀಸರ ಜೊತೆ ವಾದಕ್ಕೆ ಇಳಿದಿದ್ದಾರೆ. ನಮಗ್ಯಾಕೆ ಈ ರೂಲ್ಸ್‌ ? ನನ್ನ ಪತ್ನಿ ಗರ್ಭಿಣಿ ಆಸ್ಪತ್ರೆಗೆ ಹೇಗೆ ಕರ್ಕೊಂಡು ಹೋಗ್ಲಿ? ಎಂದು ಪ್ರಶ್ನಿಸಿದ್ದಾರೆ. ಪೊಲೀಸರು ವ್ಯಕ್ತಿಯ ಮನವೊಲಿಸಲು ಪ್ರಯತ್ನ ಮಾಡಿದರೂ ವ್ಯಕ್ತಿ ಪಟ್ಟುಬಿಡದೇ ನೆಲದ ಮೇಲೆ ಕುಳಿತು ನನಗೆ ನ್ಯಾಯ ಬೇಕು ಎಂದು ಹೇಳಿದ್ದರು. ರಾಜ್ಯಪಾಲರು ವಿಐಪಿ ಸರಿ ಆದರೆ ನಾವು ಸ್ವಲ್ಪವೂ ಮುಖ್ಯವಲ್ಲವಾ? ಜನರನ್ನು ಕಂಡ್ರೆ ನಿಮಗೆ ಬೆಲೆ ಇಲ್ವಾ? ಪರಿಸ್ಥಿತಿಗೆ ತಕ್ಕಂತೆ ರೂಲ್ಸ್‌ ಬೆಂಡ್‌ ಮಾಡಬಹುದಲ್ವಾ ಎಂದು ವ್ಯಕ್ತಿ ಪ್ರಶ್ನಿಸಿದ್ದಾರೆ.

ಕೆಲ ಸಮಯದ ನಂತರ ಪೊಲೀಸರು ವ್ಯಕ್ತಿಯ ಮನವೊಲಿಸಿ ವಾಪಾಸ್‌ ಕಳುಹಿಸಿದ್ದಾರೆ ಎನ್ನಲಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !