ಹೊಸದಿಗಂತ ಡಿಜಿಟಲ್ ಡೆಸ್ಕ್ :
7ನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಸರ್ಕಾರಿ ನೌಕರರ ಮುಷ್ಕರಕ್ಕೆ ಪ್ರೌಢ ಶಿಕ್ಷಕರ ಸಂಘ ಬೆಂಬಲ ಸೂಚಿಸಿರುವ ಹಿನ್ನಲೆಯಲ್ಲಿ 80 ಸಾವಿರ ಶಿಕ್ಷಕರು ಶಾಲೆಗಳಿಗೆ ಗೈರಾಗಿದ್ದಾರೆ.
ಈ ಕಾರಣದಿಂದ ಇಂದು (ಮಾ.1) ಬೆಂಗಳೂರು ದಕ್ಷಿಣ ಜಿಲ್ಲೆ, ಬಾಗಲಕೋಟೆಯಲ್ಲಿ ಪದವಿಪೂರ್ವ ಕಾಲೇಜುಗಳ ಪ್ರಥಮ ಪಿಯುಸಿ ಪರೀಕ್ಷೆ ಮತ್ತು ಕಲಬುರಗಿಯಲ್ಲಿ ಎಸ್ಎಸ್ಎಲ್ಸಿ ಪೂರ್ವಬಾವಿ ಪರೀಕ್ಷೆ ಹಾಗೂ ಮಂಗಳೂರಿನಲ್ಲಿ ನಡೆಯಬೇಕಿದ್ದ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ.