ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಜಯಪುರದಲ್ಲಿ ಬಾಳಿ ಬದುಕಬೇಕಿದ್ದ ಮೊಮ್ಮಗನ ಮೃತದೇಹ ಕಂಡು ತಾತ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಗೋಳಸಂಗಿ ಸಮೀಪದ ವಂದಾಲ ಗ್ರಾಮದಲ್ಲಿ, ಬೈಕ್ ಅಪಘಾತದಿಂದಾಗಿ ಮೊಮ್ಮಗ ಅಭಿಷೇಕ ಚಂದ್ರಶೇಖರ್ ಪ್ಯಾಟಿಗೌಡ್ರ ಮೃತಪಟ್ಟಿದ್ದಾರೆ.
ಚಿಕ್ಕಮ್ಮನ ಮನೆಯಲ್ಲಿ ಇದ್ದುಕೊಂಡು ಅಭಿಷೇಕ ಪಿಯುಸಿ ಓದುತ್ತಿದ್ದ ರಾತ್ರಿ ಬೈಕ್‌ನಲ್ಲಿ ತೆರಳುವ ವೇಳೆ ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದದ್ದೇ ಅಭಿಷೇಕನ ತಾಯಿ ಮತ್ತು ತಂದೆ ಜತೆ ಅಜ್ಜನೂ ಗುಳೇದಗುಡ್ಡಕ್ಕೆ ಬಂದಿದ್ದಾರೆ. ಮೊಮ್ಮಗನ ಮೃತದೇಹ ನೋಡುತ್ತಿದ್ದಂತೆ ಬಸಪ್ಪ ರಾಮಪ್ಪ ಗುಡ್ಡದ ಅವರು ಹೃದಯಾಘಾತದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ತಾತ ಮೊಮ್ಮಗನ ಅಂತ್ಯಕ್ರಿಯೆಯನ್ನು ಒಟ್ಟಿಗೇ ಮಾಡಲಾಗಿದೆ.