ಹೊಸದಿಗಂತ ಮಂಡ್ಯ :
ರಾಜ್ಯದಲ್ಲಿರುವ ಸರ್ಕಾರ ಸತ್ತು ಹೋಗಿದೆ. ಸಚಿವರಿಗೆ ಕೆಲಸವಿಲ್ಲದಂತಾಗಿದೆ. ಹಾದಿ ಬೀದಿಯಲ್ಲಿ ಭ್ರಷ್ಟಾಚಾರದ ಬಗ್ಗೆ ಜನರು ಮಾತನಾಡುತ್ತಿದ್ದಾರೆ ಎಂದು ಉಕ್ಕು ಮತ್ತು ಭಾರೀ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಜಿ.ಪಂ. ಕಾವೇರಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಗೆ ಭಾಗವಹಿಸಲು ಆಗಮಿಸಿದ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದುಡ್ಡು ಇದ್ದರೆ ಏನು ಬೇಕಾದರೂ ಕೊಂಡುಕೊಳ್ಳಬಹುದು. ಮುಖ್ಯಮಂತ್ರಿಗಳಿಗೆ ಅವರ ಹಗರಣದ ಬಗ್ಗೆ ಮಾತನಾಡಲು ಸಮಯ ಸಾಕಾಗುತ್ತಿಲ್ಲ ಟೀಕಿಸಿದರು.
ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯ :
ಮುಡಾ ರೀತಿ ಪ್ರಿಯಾಂಕ ಖರ್ಗೆ ಅವರ ವಿಚಾರವೂ ಹೊರಗೆ ಬಂದಿದದೆ. ಬುದ್ಧ ವಿಹಾರ ಕಟ್ಟಲು ಸಿದ್ಧಾರ್ಥ ವಿಹಾರ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಅದೊಂದು ಧಾರ್ಮಿಕ ಸಂಸ್ಥೆ. ಆದರೆ ಅದನ್ನು ಯಾವುದೋ ವ್ಯವಹಾರ ಮಾಡುವುದಕ್ಕೆ, ಕಾರ್ಖಾನೆ ಕಟ್ಟುವುದಕ್ಕೆ ಉಪಯೋಗಿಸಿಕೊಳ್ಳಲಾಗಿದೆ ಎಂದು ಆರೋಪಿಸಿದರು.