ಸರ್ಕಾರಿ ಶಾಲಾ ಮಕ್ಕಳಿಗೂ ಸಿಗಲಿ ‘ಗಂಧದ ಗುಡಿ’ ಸಿನಿಮಾ ನೋಡುವ ಅವಕಾಶ: ಶಿಕ್ಷಣ ಸಚಿವರಿಗೆ ಸೂಲಿಬೆಲೆ ಮನವಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕರ್ನಾಟಕದಾದ್ಯಂತ ‘ಗಂಧದ ಗುಡಿ’ ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಅಪ್ಪು ನೋಡಲು ಅಭಿಮಾನಿಗಳು ಚಿತ್ರಮಂದಿಗಳ ಕಡೆ ಸಾಗುತ್ತಿದ್ದಾರೆ.

ಇತ್ತ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಉಚಿತವಾಗಿ ಪ್ರದರ್ಶನ ಮಾಡವಂತೆ ಶಿಕ್ಷಣ ಸಚಿವ ನಾಗೇಶ್‌ಗೆ ಚಿಂತಕರು ಹಾಗೂ ಪೋಷಕರಿಂದ ಮನವಿ ಮಾಡಲಾಗಿದೆ. ಈ ಕುರಿತಾಗಿ ಟ್ವೀಟರ್​ನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಅಭಿಯಾನ ಶುರು ಮಾಡಿದ್ದಾರೆ.

‘ಗಂಧದ ಗುಡಿ ಚಿತ್ರವನ್ನು ಸರ್ಕಾರದ ವತಿಯಿಂದ ಎಲ್ಲಾ ಶಾಲಾ ಮಕ್ಕಳಿಗೆ ಯಾಕೆ ತೋರಿಸಬಾರದು’ ಎಂದು ಪ್ರಶ್ನಿಸುವ ಮೂಲಕ ಶಿಕ್ಷಣ ಮಂತ್ರಿಗಳಲ್ಲಿ ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಬಿ.ಸಿ ನಾಗೇಶ್ ಅವರು ಟ್ವೀಟರ್​​ನಲ್ಲಿ ಸಿನಿಮಾ ಬಿಡುಗಡೆಯಾದ ದಿನ ಅದರ ಕುರಿತು ಪೋಸ್ಟ್​ ಹಾಕಿದ್ದರು. ಸಿನಿಮಾದಲ್ಲಿ ‘ರಾಜ್ಯದ ರಮಣೀಯ ಪ್ರಕೃತಿ ಸೌಂದರ್ಯ, ವನ್ಯ ಮೃಗಗಳು, ನದಿ, ಸಮುದ್ರ, ಜಲಚರಗಳನ್ನು ಕಣ್ಮನ ತುಂಬುವಂತೆ ಚಿತ್ರಿಸಿ, ಮಹತ್ವದ ಸಂದೇಶವನ್ನು ನೀಡುವ ‘ಕರ್ನಾಟಕ ರತ್ನ’, ಯುವ ಜನತೆಯ ಕಣ್ಮಣಿ ಪುನೀತ್ ರಾಜಕುಮಾರ್ ಅವರ ಪರಿಸರ ಪ್ರೀತಿಯ ‘ಗಂಧದಗುಡಿ’ ಇಂದು ಬಿಡುಗಡೆಯಾಗಿದೆ. ಇಡೀ ತಂಡಕ್ಕೆ ಹಾರ್ದಿಕ ಶುಭಾಶಯಗಳು’ ಎಂದು ಬರೆದುಕೊಂಡಿದ್ದರು.

ಶಿಕ್ಷಣ ಮಂತ್ರಿಗಳ ಈ ಪೋಸ್ಟ್​ಗೆ ಚಿಂತಕ ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡುವ ಮೂಲಕ ಮನವಿ ಮಾಡಿಕೊಂಡಿದ್ದಾರೆ. ‘ನಾಗೇಶ್ ಜಿ, ಚಿತ್ರದ ವಸ್ತು ಭವಿಷ್ಯದ ಪೀಳಿಗೆಗೆ ಪ್ರಕೃತಿ, ವನ್ಯ ಜೀವಿಗಳ ಕುರಿತಂತೆ ಆಸಕ್ತಿ ಮತ್ತು ಪ್ರೀತಿ ಹುಟ್ಟಿಸುವಂಥದ್ದಾಗಿದೆ. ಅದನ್ನೇಕೆ ಶಾಲಾ ಮಕ್ಕಳಿಗೆ ತೋರಿಸುವ ವ್ಯವಸ್ಥೆ ಆಗಬಾರದು? ಸರ್ಕಾರವೇ ಎಲ್ಲೆಡೆ ಈ ಪ್ರಯತ್ನಕ್ಕೆ ಮುಂದಾದರೆ ಪುನೀತ್ ರಾಜಕುಮಾರ್​ರ ನೆನಪು ಮತ್ತು ಕಾಡಿನ ಮೇಲಿನ ಗೌರವ ಎರಡೂ ಶಾಶ್ವತವಾಗುತ್ತದೆ’ ಎಂದು ಕೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!