ಬ್ರೆಜಿಲ್​ ನ ನೂತನ ಅಧ್ಯಕ್ಷ ಲುಲಾ ಡಾ ಸಿಲ್ವಾಗೆ ಅಭಿನಂದಿಸಿದ ಪ್ರಧಾನಿ ಮೋದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬ್ರೆಜಿಲ್​ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಲುಲಾ ಡಾ ಸಿಲ್ವಾಗೆ ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ.
ಟ್ವಿಟರ್​ನಲ್ಲಿ ಅಭಿನಂದಿಸಿದ ಮೋದಿ ‘ಬ್ರೆಜಿಲ್‌ನಲ್ಲಿ ಅಧ್ಯಕ್ಷೀಯ ಚುನಾವಣೆಯನ್ನು ಗೆದ್ದಿರುವ ಲುಲಾ ಅವರಿಗೆ ಅಭಿನಂದನೆಗಳು.ನಮ್ಮ ದ್ವಿಪಕ್ಷೀಯ ಸಂಬಂಧವನ್ನು ಮತ್ತು ಕಾರ್ಯಕ್ಷೇತ್ರವನ್ನು ಮತ್ತಷ್ಟು ವಿಸ್ತರಿಸಿ ಜಾಗತಿಕ ಸಮಸ್ಯೆಗಳ ಬಗ್ಗೆ ನಿಮ್ಮೊಂದಿಗೆ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ’ ಎಂದು ಹೇಳಿದ್ದಾರೆ.
ಲುಲಾ ಎಂದೇ ಪ್ರಸಿದ್ಧರಾಗಿರುವ ಸಿಲ್ವಾ, ಜೈರ್​ ಬೊಲ್ಸೊನಾರೊರನ್ನು ಸೋಲಿಸಿ ಬ್ರೆಜಿಲ್​ನ ಅಧ್ಯಕ್ಷರಾದರು. ಲುಲಾ ಶೇಕಡ 50.83 ಮತಗಳನ್ನು ಪಡೆದು ಗೆದ್ದಿದ್ದಾರೆ. ಪ್ರತಿಸ್ಪರ್ಧಿ ಜೈರ್​ ಶೇಕಡಾ 49.17 ಮತಗಳನ್ನು ಪಡೆದಿದ್ದಾರೆ. ಒಟ್ಟು 98 ಶೇಕಡಾ ಜನರು ಮತದಾನ ಮಾಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!