ಸರಕಾರಿ ಶಾಲಾ ಗೋಡೆ ನೆಲಸಮ: ತರಗತಿ ಕೊಠಡಿಗಳು ಸಂಪೂರ್ಣ ಜಖಂ

ಹೊಸದಿಗಂತ ಮಡಿಕೇರಿ:

ಸರ್ಕಾರಿ ಶಾಲೆ‌ಯ ಮೇಲೆ ಮತ್ತೆ ಗುಡ್ಡ ಕುಸಿದ ಬಗ್ಗೆ ವರದಿಯಾಗಿದ್ದು, ತರಗತಿ ಕೊಠಡಿಗಳು ಜಖಂಗೊಂಡಿವೆ.
ಸೋಮವಾರ ಸುರಿದ ಭಾರೀ ಮಳೆಗೆ ಗುಡ್ಡ ರಾತ್ರಿ ವೇಳೆ‌ ಶಾಲೆಯ ಗೋಡೆ ಮೇಲೆ ಕುಸಿದಿದ್ದು,ತರಗತಿ ಕೊಠಡಿಗಳು ಜಖಂಗೊಂಡು ಭಾರೀ ಹಾನಿ ಸಂಭವಿಸಿರುವುದಾಗಿ ಸ್ಥಳೀಯರು ಹೇಳಿದ್ದಾರೆ.

ಈ ಹಿಂದೆಯೂ ಹಲವು ಸಲ ಇದೇ ಶಾಲೆಯ ಮೇಲೆ ಗುಡ್ಡ ಕುಸಿದಿದ್ದರೂ, ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವಲ್ಲಿ ಸಂಬಂಧಿಸಿದವರು ವಿಫಲರಾಗಿದ್ದಾರೆ. ಅದೃಷ್ಟವಶಾತ್ ರಾತ್ರಿ ವೇಳೆ ಗುಡ್ಡ ಕುಸಿದಿರುವುದರಿಂದ ಯಾವುದೇ ಅನಾಹುತವಾಗಿಲ್ಲ. ಹಗಲು ವೇಳೆ ಶಾಲಾ ತರಗತಿಗಳು ನಡೆಯುವ ಸಂದರ್ಭದಲ್ಲಿ ಗುಡ್ಡ ಕುಸಿದು ಜೀವ ಹಾನಿಯಾಗಿದ್ದರೆ ಯಾರು ಹೊಣೆ ಎಂದು ಗ್ರಾಮಸ್ಥರು ಪ್ರಶ್ನಿಸಿದ್ದಾರೆ.

ಸಂಬಂಧಿಸಿದವರು ಈಗಲಾದರೂ ಎಚ್ಚೆತ್ತುಕೊಂಡು ಈ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!