Sunday, November 27, 2022

Latest Posts

ಬಾಲ್‌ ಕ್ಯಾಚ್‌ ಹಿಡಿದು ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಓಡಿದ ಪರಿ ಹೇಗಿದೆ ನೋಡಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಅವರು ಚೆಂಡನ್ನು ಹಿಡಿದು ಓಡಿದ್ದಾರೆ. ಗ್ರೇಮ್ ಸ್ವಾನ್ ಅವರ ವಿಚಿತ್ರ ವರ್ತನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದೆ. ಟಿ10 ಯುರೋಪಿಯನ್ ಕ್ರಿಕೆಟ್ ಚಾಂಪಿಯನ್‌ಶಿಪ್‌ನಲ್ಲಿ ಇಟಲಿ ಮತ್ತು ಸ್ವಿಟ್ಜರ್ಲೆಂಡ್ ನಡುವಿನ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ಇಟಲಿ ಮತ್ತು ಸ್ವಿಟ್ಜರ್ಲೆಂಡ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಇಟಲಿ ಆಟಗಾರನೊಬ್ಬ ಚೆಂಡನ್ನು ಸಿಕ್ಸರ್ ಬಾರಿಸಿದರು. ಸ್ಟ್ಯಾಂಡ್‌ನಲ್ಲಿದ್ದ ಇಂಗ್ಲೆಂಡ್‌ನ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್ ಚೆಂಡನ್ನು ಕ್ಯಾಚ್ ಹಿಡಿದುರು. ಅವರ ಸಂತೋಷಕ್ಕೆ ಪಾರವೇ ಇಲ್ಲದಂತೆ ಕ್ಯಾಚ್ ಹಿಡಿದ ಚೆಂಡಿನೊಂದಿಗೆ ಓಡಿದ್ದಾರೆ. ಸ್ವಾನ್ 2013 ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಪ್ರಸ್ತುತ ವ್ಯಾಖ್ಯಾನಕಾರ ಮತ್ತು ವಿಶ್ಲೇಷಕರಾಗಿ ತಮ್ಮ ಜೀವನವನ್ನು ಮುಂದುವರೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!