ಕೋಮಾರಪಂಥ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ: ಶಾಸಕಿ ರೂಪಾಲಿ

ಹೊಸದಿಗಂತ ವರದಿ, ಕಾರವಾರ:

ಕೋಮಾರಪಂಥ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 70 ಲಕ್ಷ ರೂ ಅನುದಾನ ಬಿಡುಗಡೆಯಾಗಿದ್ದು, ಅದರ ಬಳಕೆ ಮಾಡಿಕೊಳ್ಳುವಂತೆ ಶಾಸಕಿ ರೂಪಾಲಿ ಎಸ್. ನಾಯ್ಕ ಹೇಳಿದರು.

ಕಾರವಾರದ ಪ್ರವಾಸಿ ಮಂದಿರದಲ್ಲಿ ಕೋಮಾರಪಂಥ ಸಮಾಜದ ಮುಖಂಡರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ನಡೆದ ಸಭೆಯಲ್ಲಿ ಅವರು ಮಾತನಾಡಿದರು.

ಸಮಾಜದ ಏಳಿಗೆಗೆ ಹಾಗೂ ಸಮುದಾಯ ಭವನ ನಿರ್ಮಾಣ ಮಾಡಲು 70 ಲಕ್ಷ ಅನುದಾನವನ್ನು ಒದಗಿಸಲಾಗಿದೆ. ಈ ಅನುದಾನದಲ್ಲಿ ಸಮುದಾಯ ಭವನದ ಕಟ್ಟಡವನ್ನು ಸುಸಜ್ಜಿತವಾಗಿ ಭವ್ಯವಾಗಿ ನಿರ್ಮಿಸಬೇಕು. ಎಲ್ಲ ಕಾರ್ಯಕ್ಕೂ ಅನುಕೂಲವಾಗುವಂತೆ ನಿರ್ಮಾಣ ಮಾಡಬೇಕು. ಸಮಾಜದ ಹಿತಕ್ಕಾಗಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ‌. ಯಾವುದೇ ಬೇಡಿಕೆ, ಸಮಸ್ಯೆಗಳಿದ್ದರೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು.

ಸಮಾಜದ ಮುಖಂಡರಾದ ಛತ್ರಪತಿ ಮಾಳ್ಸೆಕರ ಮಾತನಾಡಿ, ನಮ್ಮ ಸಮಾಜದ ಏಳಿಗೆಗೆ ಶ್ರಮಿಸುತ್ತಿರುವುದು‌ ಶ್ಲಾಘನೀಯ. ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸಿರುವುದಕ್ಕೆ ಧನ್ಯವಾದವನ್ನು ಸಲ್ಲಿಸಿದರು.

ಸಮಾಜದ ಅಧ್ಯಕ್ಷರಾದ ಮಾರುತಿ ನಾಯ್ಕ, ಮುಖಂಡರಾದ ಸುರೇಂದ್ರ ನಾಯ್ಕ ಮಾತನಾಡಿ ಸಮಾಜದ ಪರವಾಗಿ ಧನ್ಯವಾದಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಕೋಮಾರಪಂತ ಸಮಾಜದ ಮುಖಂಡರಾದ ದೇವಿದಾಸ ನಾಯ್ಕ, ಸಹದೇವ ನಾಯ್ಕ, ಗಣಪತಿ ನಾಯ್ಕ, ಸುದಾಕರ ನಾಯ್ಕ, ಉದಯ ನಾಯ್ಕ, ಸುಭಾಷ ನಾಯ್ಕ, ರತ್ನಾಕರ ನಾಯ್ಕ, ರಾಜೇಂದ್ರ ಅಂಚೇಕರ, ರಾಜೇಶ ನಾಯ್ಕ ಇನ್ನಿತರ ಸಮಾಜ ಮುಖಂಡರು ಇದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!