Thursday, December 8, 2022

Latest Posts

ಬ್ರಾಹ್ಮಣರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ ಸಿದ್ದರಾಮಯ್ಯ ಆಪ್ತ: ಬಹಿರಂಗ ಕ್ಷಮೆಗೆ ಆಗ್ರಹ

ಹೊಸದಿಗಂತ ವರದಿ, ಬಳ್ಳಾರಿ:

ಬ್ರಾಹ್ಮಣ ಹಾಗೂ ಬ್ರಾಹ್ಮಣ್ಯಿಕೆಯನ್ನು ಯಾರೂ ನಂಬಬಾರದು, ವೇದ, ಉಪನಿಷತ್ ಗಳು ನಮ್ಮ ದೇಶವನ್ನು ಹಾಳು ಮಾಡಿವೆ ಎಂದು ಅವಹೇಳನಕಾರಿಯಾಗಿ ಮಾತನಾಡಿದ ಮಾಜಿ ಸಿ.ಎಂ.ಸಿದ್ದರಾಮಯ್ಯ ಆಪ್ತ ಪಾ.ಮಲ್ಲೇಶ್ ಎನ್ನುವವರು ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ, ಕೂಡಲೇ ಈ ಹೇಳಿಕೆಯನ್ನು ಹಿಂಪಡೆದು ಸಿದ್ದರಾಮಯ್ಯ ಅವರು ಬಹಿರಂಗ ಕ್ಷಮೆಯಾಚಿಸಬೇಕು, ನಿರ್ಲಕ್ಷ್ಯ ವಹಿಸಿದರೇ ಪ್ರತಿಭಟನೆಯ ಸ್ವರೂಪ ಬದಲಾಗಲಿದೆ ಎಂದು ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಸಚ್ಚಿದಾನಂದ‌ ಮೂರ್ತಿ ಅವರು ಎಚ್ಚರಿಸಿದರು.

ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಬುಧವಾರ ಸಂಜೆ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. ಬ್ರಾಹ್ಮಣರ ಬಗ್ಗೆ ನಾಲಿಗೆ ಹರಿಬಿಟ್ಟಿದ್ದು, ಇದು ಅತ್ಯಂತ ಖಂಡನೀಯ, ಬ್ರಾಹ್ಮಣ ಸಮುದಾಯ ಎಲ್ಲ ವರ್ಗದವರ ಪ್ರೀತಿ, ವಿಶ್ವಾಸ ಗಳಿಸಿಕೊಂಡು ಬಂದಿದೆ, ಅನಾವಶ್ಯಕವಾಗಿ ಸಿದ್ದರಾಮಯ್ಯ ಅವರ ಆಪ್ತ ಮಲ್ಲೇಶ್ ಬ್ರಾಹ್ಮಣರ ಬಗ್ಗೆ ನಾಲಿಗೆ ಬಿಡುವ ಮೂಲಕ ಬ್ರಾಹ್ಮಣರ ಸ್ವಾಭಿಮಾನವನ್ನು ಕೆಣಕಿದ್ದಾರೆ. ಸಮಾಜದಲ್ಲಿ ಶಾಂತಿ, ಸಹಬಾಳ್ವೆಯಿಂದ ಇದ್ದ ಬ್ರಾಹ್ಮಣರ ಬಗ್ಗೆ ಅನಾಗರಿಕತೆಯನ್ನು ಪ್ರದರ್ಶಿಸಿದ್ದಾರೆ. ಕೂಡಲೇ ಈ ಹೇಳಿಕೆಯನ್ನು ಹಿಮ ಪಡೆದು ಬಹಿರಂಗ ಕ್ಷಮೆಯಾಚಿಸಬೇಕು, ಇಂತಹ ಸಮಾಜಘಾತುಕರ ವಿರುದ್ಧ ಸರ್ಕಾರ ಕಠಿಣ ಕಾನುನು ಕ್ರಮ ಜರುಗಿಸಿ, ಸುಮೊಟೊ ಅಡಿ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವೇದ ಉಪನಿಷತ್ ಗಳು ನಮ್ಮ ದೇಶವನ್ನು ಹಾಳು ಮಾಡಿವೆ, ಬ್ರಾಹ್ಮಣ, ಲಿಂಗಾಯತ ಹಾಗೂ ಒಕ್ಕಲಿಗರು ಇತ್ತೀಚೆಗೆ ಹಲಾವಾರು ಮಠಗಳನ್ನು ಕಟ್ಟಿಕೊಂಡು ಬೇಡಿಕೆ ಇಡುತ್ತಿದ್ದಾರೆ ಎಂದು ಹೇಳಿಕೆ ನೀಡುವ ಮೂಲಕ ಹಿಂದೂಗಳ ಶ್ರದ್ಧ ಮತ್ತು ಧಾರ್ಮಿಕ ಭಾವನೆಗಳಿಗೆ ನೋವನ್ನುಂಟು ಮಾಡಿದ್ದಾರೆ, ಆರ್ಥಿಕವಾಗಿ ದುರ್ಬಲ ರಾದ ವರ್ಗದವರಿಗೆ ಸುಪ್ರೀಂಕೋರ್ಟ್ ಶೇ.10ರಷ್ಡು ಮೀಸಲಾತಿ ಕಲ್ಪಿಸಿದೆ. ಇದರಲ್ಲಿ ಬ್ರಾಹ್ಮಣರ ಕೈವಾಡವಿದೆ ಎಂದು ಸುಳ್ಳು ಹೇಳುವ ಮೂಲಕ ಮಾನ್ಯ ಸುಪ್ರೀಂಕೋರ್ಟ್ ಗೂ ಜಾತಿಯ ಬಣ್ಣ ಹಚ್ಚಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರ ಎದುರೇ ಈ ರೀತಿ ಬೆಂಬಲಿಗ ಮಲ್ಲೇಶ್ ಮಾತನಾಡಿದರೂ ತುಟಿಬಿಚ್ಚಿಲ್ಲ, ಇದರ ಹಿಂದೆ ಅವರ ಕೈವಾಡ ಇದ್ದೇ ಇರಲಿದೆ, ಕೂಡಲೇ ಬಹಿರಂಗ ಕ್ಷಮೆಯಾಚಿಸದಿದ್ದರೇ ಹೊರಾಟದ ಸ್ವರೂಪ ಬದಲಾಗಲಿದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಬ್ರಾಹಮ್ಮಣ ಒಕ್ಕೂಟದ ಅಧ್ಯಕ್ಷ ಪ್ರಕಾಶ್ ರಾವ್, ಗೌರವಾಧ್ಯಕ್ಷ ಡಾ.ಬಿ.ಕೆ.ಸುಂದರ್, ಉಪಾಧ್ಯಕ್ಷ ಡಾ.ಶ್ರೀನಾಥ್, ಖಜಾಂಚಿ ಅನಿಲ್ ಕುಮಾರ್, ಪ್ರಹ್ಲಾದ್ ದೇಸಾಯಿ, ನೆಮಕಲ್ ರಾವ್, ಸಿಮೆಂಟ್ ಗಿರಿ, ಜನತಾ ಹೋಟೆಲ್ ಗುರು, ಲೋಕನಾಥ್, ಭೀಮರಾವ್ ಕುಲಕರ್ಣಿ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!