September 22, 2026
Tuesday, September 22, 2026
spot_img

HEALTH | ದ್ರಾಕ್ಷಿ ಸೀಸನ್‌ ಬಂದೇಬಿಡ್ತು, ಕಪ್ಪು ದ್ರಾಕ್ಷಿ ತಿಂದ್ರೆ ಇಮ್ಯುನಿಟಿ ಜಾಸ್ತಿಯಂತೆ!

ದ್ರಾಕ್ಷಿ ಸೀಸನ್‌ ಬಂದೇ ಬಿಡ್ತು, ಇನ್ನು ಯಾವುದೇ ತರಕಾರಿ ಅಂಗಡಿಗೆ ಹೋದ್ರೂ ದ್ರಾಕ್ಷಿಯ ಸಾಲು ಸಾಲು ಕಾಣಿಸುತ್ತದೆ. ಸೀಸನ್‌ ಬಂದಾಗ ಹಣ್ಣುಗಳನ್ನು ತಿಂದುಬಿಡಬೇಕು. ದ್ರಾಕ್ಷಿ ತಿನ್ನುವ ಮುನ್ನ ಅದನ್ನು ಬಿಸಿನೀರಿನಲ್ಲಿ ನೆನೆಸಿ, ಉಪ್ಪು, ಸೋಡಾಪುಡಿ ಹಾಕಿ ಚೆನ್ನಾಗಿ ತೊಳೆದು ತಿನ್ನಿ. ಮೂರು ವರ್ಷಕ್ಕಿಂತ ಪುಟ್ಟ ಮಕ್ಕಳಿಗೆ ಈಗಲೇ ದ್ರಾಕ್ಷಿ ಕೊಡೋದು ಸುರಕ್ಷಿತ ಅಲ್ಲ ಎನ್ನಲಾಗಿದೆ.

ದ್ರಾಕ್ಷಿಯಲ್ಲಿ ಏನಿದೆ?

ದ್ರಾಕ್ಷಿ ತಿನ್ನೋದ್ರಿಂದ ನಿಮ್ಮ ಇಮ್ಯುನಿಟಿ ಸೂಪರ್‌ ಆಗಿರುತ್ತದೆ.

ಕಂಪ್ಯೂಟರ್‌-ಮೊಬೈಲ್‌ ನೋಡಿ ಕಣ್ಣುಗಳು ಉರಿಯುತ್ತಿದ್ದರೆ ದ್ರಾಕ್ಷಿ ತಿನ್ನಿ. ಇವು ಕಣ್ಣುಗಳ ಆರೋಗ್ಯಕ್ಕೆ ಪೂರಕ.

ದ್ರಾಕ್ಷಿಯಲ್ಲಿರುವ ಫೈಬರ್‌ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

ಆಂಟಿಆಕ್ಸಿಡೆಂಟ್ಸ್‌ ಹೆಚ್ಚಿರುವ ಕಾರಣ ಆರೋಗ್ಯ ಗಟ್ಟಿಯಾಗಿರುತ್ತದೆ.

ಕಪ್ಪುದ್ರಾಕ್ಷಿಯಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೊಜ್ಜು ಕಡಿಮೆ ಮಾಡುತ್ತದೆ.

ಹಲ್ಲುಗಳ ಆರೋಗ್ಯಕ್ಕೂ ಈ ದ್ರಾಕ್ಷಿಯೇ ಬೆಸ್ಟ್‌

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !