ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕನಾಥ್ ಶಿಂಧೆ ಮಹಾರಾಷ್ಟ್ರ ಮುಖ್ಯಮಂತ್ರಿಯಾದ ಬಳಿಕ ಸಿಎಂ ಕಾಮನ್‌ಮ್ಯಾನ್ ಪಟ್ಟ ಉಳಿಸಿಕೊಂಡಿದ್ದಾರೆ. ಇದೀಗ ಹೆದ್ದಾರಿಯಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪ್ರಯಾಣಿಕರ ನೆರವಿಗೆ ಧಾವಿಸುವ ಮೂಲಕ ಮತ್ತೆ ಮಾನವೀಯತೆ ಮರೆದಿದ್ದಾರೆ.
ಸಿಎಂ ಏಕನಾಥ್ ಶಿಂಧೆ ಕಾರ್ಯಕ್ರಮ ಮುಗಿಸಿ ಮುಂಬೈ ಎಕ್ಸ್‌ಪ್ರೆಸ್ ಹೈವೇ ಮೂಲಕ ಸಂಚರಿಸುತ್ತಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಕಾರು ಹೊತ್ತಿ ಉರಿಯುತ್ತಿರುವುದನ್ನು ಗಮನಿಸಿತಕ್ಷಣವೇ ಕಾರು ನಿಲ್ಲಿಸಲು ಸೂಚಿಸಿದ ಏಕನಾಥ್ ಶಿಂಧೆ ಕಾರು ಪ್ರಯಾಣಿಕರ ಬಳಿಗೆ ಧಾವಿಸಿದ್ದಾರೆ.
ಕಾರಿನಲ್ಲಿ ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಪ್ರಯಾಣಿಕರು ಕಾರು ನಿಲ್ಲಿಸಿ ಹೊರಬಂದಿದ್ದಾರೆ. ಇದರ ಬೆನ್ನಲ್ಲೇ ಕಾರು ಹೊತ್ತಿ ಉರಿದಿದೆ. ಇದೇ ವೇಳೆ ಶಿಂಧೆ ಇದೇ ರಸ್ತೆ ಮೂಲಕ ಸಾಗಿದ್ದಾರೆ. ಹೀಗಾಗಿ ಘಟನೆ ಗಮನಿಸಿ ಪ್ರಯಾಣಿಕರ ಬಳಿ ಬಂದು ಎಲ್ಲಾ ನೆರವು ನೀಡಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿ, ಎಲ್ಲರ ಆರೋಗ್ಯ ವಿಚಾರಿಸಿದ್ದಾರೆ.
Dutiful CM Eknath Shinde stops his convoy at highway, helps man whose car caught fire pic.twitter.com/XpeUxpRfuz
— Sheetal Chopra 🇮🇳 (@SheetalPronamo) September 13, 2022
ಮುಂಬೈ ನ ವಿಲೆ ಪರ್ಲ್ ಏರಿಯಾದಲ್ಲಿ ಈ ಘಟನೆ ನಡೆದಿದೆ. ಐಷಾರಾಮಿ ಕಾರು ತಾಂತ್ರಿಕ ಕಾರಣಗಳಿಂದ ಹೊತ್ತಿ(Car Fire) ಉರಿದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ತಡ ರಾತ್ರಿ ಈ ಘಟನೆ ಸಂಭವಿಸಿದೆ.
ಕಾರಿನ ಚಾಲಕನ ಬಳಿ ಮಾತನಾಡಿದ ಸಿಎಂ ಶಿಂಧೆ, ಎಲ್ಲಾ ನೆರವಿನ ಭರವಸೆ ನೀಡಿದ್ದಾರೆ. ಅಧಿಕಾರಿಗಳಿಗೆ ಸೂಚನೆ ನೀಡಿದ ಬೆನ್ನಲ್ಲೇ ಎರಡು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದೆ. ಅಧಿಕಾರಿಗಳ ತಂಡ ಹೊತ್ತಿ ಉರಿದ ಕಾರು ಪ್ರಯಾಣಿಕರಿಗೆ ಇತರ ನೆರವು ನೀಡಿದ್ದಾರೆ. ಶಿಂಧೆ ನೆರವಿಗೆ ಧಾವಿಸಿದ ದೃಶ್ಯ, ಚಾಲಕನ ಬಳಿಕ ಮಾತನಾಡುತ್ತಿರುವ ದೃಶ್ಯ ವೈರಲ್ ಆಗಿದೆ.