ಕನ್ನಡದ ಬಿಗ್‌ ಬಾಸ್‌ ಸೀನಸ್‌ 9 ಕ್ಕೆ ಹೋಗ್ತಾರಾ ಅನಿರುದ್ಧ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕನ್ನಡದ ಬಿಗ್‌ ಬಾಸ್‌ ಓಟಿಟಿ ಮೊದಲ ಸೀಸನ್‌ ಕೊನೆಯ ಹಂತಕ್ಕೆ ತಲುಪಿದ್ದು, ಇದರ ಬೆನ್ನಲ್ಲೇ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಕನ್ನಡದ ಬಿಗ್‌ ಬಾಸ್‌ ಸೀನಸ್‌ 9 ಶೋ ಶುರುವಾಗಲು ಸಿದ್ಧತೆ ನಡೆಯುತ್ತಿದೆ.

ಓಟಿಟಿಯಿಂದ ಕೆಲವು ಸ್ಪರ್ಧಿಗಳು ಬಿಗ್‌ ಬಾಸ್‌ ಮೈನ್​ ಸೀಸನ್​ಗೆ (ಟಿವಿ ಶೋ) ಹೋಗಲಿದ್ದಾರೆ. ಈಗಾಗಲೇ ಪ್ರೋಮೋ ರಿಲೀಸ್‌ ಆಗಿದ್ದು, ಇದರ ಬೆನ್ನಲ್ಲೇ ದೊಡ್ಮನೆಗೆ ಯಾರೆಲ್ಲಾ ಹೋಗಬಹುದೆಂಬ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಜೋರಾಗಿದೆ.

ಅದರಂತೆ ಈ ಬಾರಿಯ ಬಿಗ್ ಬಾಸ್ ದೊಡ್ಮನೆಗೆ ನಟ ಅನಿರುದ್ಧ್ ಜತ್ಕರ್ ಹೋಗ್ತಾರೆ ಎಂಬ ಸುದ್ದಿಯೊಂದು ಹರಿದಾಡುತ್ತಿದೆ. ಮೂಲಗಳ ಪ್ರಕಾರ, ಜೊತೆ ಜೊತೆಯಲಿ ಸೀರಿಯಲ್​ನಿಂದ ಹೊರ ಬಂದಿರುವ ಆರ್ಯವರ್ಧನ್​ ಖ್ಯಾತಿಯ ಅನಿರುದ್ಧ್ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡಲಿದ್ದಾರಂತೆ.

ಬಿಗ್‌ಬಾಸ್‌ ತಂಡ ಕೂಡ ಅನಿರುದ್ಧ್ ಅವರನ್ನು ಸಂಪರ್ಕ ಮಾಡಿದೆಯಂತೆ. ಇದಕ್ಕೆ ಅನಿರುದ್ಧ್ ಸಹ ಒಪ್ಪಿದ್ದಾರೆ ಎನ್ನಲಾಗುತ್ತಿದೆ. ಆದರೆ, ಧಾರಾವಾಹಿ ಮತ್ತು ಯಾವುದೇ ರಿಯಾಲಿಟಿ ಶೋಗಳಲ್ಲಿ ಅನಿರುದ್ಧ್ ಅವರನ್ನು ಬಳಸಿಕೊಳ್ಳಬಾದರು ಎಂದು ಕರ್ನಾಟಕ ಟೆಲಿವಿಷನ್ ಅಸೋಷಿಯೇಷನ್ ಅಂಗ ಸಂಸ್ಥೆಯಾದ ಟೆಲಿವಿಷನ್ ನಿರ್ದೇಶಕರ ಸಂಘ ಬ್ಯಾನ್ ಮಾಡಿರೋ ಕಾರಣ, ಅನಿರುದ್ಧ್ ಬಿಗ್ ಬಾಸ್ ಮನೆಗೆ ಹೋಗ್ತಾರಾ ಅನ್ನೋದು ಪ್ರಶ್ನೆಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!