Sunday, March 26, 2023

Latest Posts

ಮಹದಾಯಿ ಅನುಷ್ಠಾನಕ್ಕೆ ಸರ್ಕಾರ ಬದ್ಧ: ಸಚಿವ ಹಾಲಪ್ಪ ಆಚಾರ್

ಹೊಸ ದಿಗಂತ ವರದಿ, ಧಾರವಾಡ:

ಮಹದಾಯಿ ಅನುಷ್ಠಾನಕ್ಕೆ ಸರ್ಕಾರ ಬದ್ಧವಿದೆ. ಈ ಹಿಂದೆ ರೂ.500 ಕೋಟಿ, ಈಗ ರೂ.1000 ಕೋಟಿ ಮೀಸಲಿಟ್ಟಿದೆ. ಶೀಘ್ರದಲ್ಲಿಯೇ ಯೋಜನೆ ಅನುಷ್ಠಾನಿಸಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ನ್ಯಾಯಾಧೀಕರಣದ ತೀರ್ಪಿನ ಅನ್ವಯ ನೀರು ಹಂಚಿಕೆ ನೀರು ಬಳಕೆಗೆ ಕಳಸಾ-ಬಂಡೂರು ಸೇರಿದಂತೆ ರಾಜ್ಯದ ನೀರಾವರಿ ಯೋಜನೆ ಅನುಷ್ಠಾನಿಸಿ, ರೈತರ ಬದುಕು ಹಸನಗೊಳಿಸಿದೆ ಎಂದರು.
ನೀರಾವರಿ ಬಗ್ಗೆ ಸರ್ಕಾರ ಅತ್ಯಂತ ಮುತುವರ್ಜಿಯಿಂದ ಕೆಲಸ ಮಾಡುತ್ತಿದೆ ಎಂಬದಕ್ಕೆ ಬಜೆಟ್ ಸಾಕ್ಷಿ. ಈ ಭಾಗದ ಮುಖ್ಯಮಂತ್ರಿಗಳೇ ಇರುವುದರಿಂದ ಹಂತ-ಹoತವಾಗಿ ಅನುದಾನ ಬಳಸಿ, ಮಹದಾಯಿಗೆ ಚಾಲನೆ ನೀಡಲಿದೆ ಎಂದು ತಿಳಿಸಿದರು.
ಅಗತ್ಯವಿಲ್ಲ ಕೈ ಸರ್ಟಿಫಿಕೇಟ್:
ಬಿಜೆಪಿ ಸರ್ಕಾರ ಹಣ ಮಾಡುತ್ತಿದೆಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಈ ಹಿಂದೆ ರಾಷ್ಟçದಲ್ಲಿ ಕಾಂಗ್ರೆಸ್ ಆಡಳಿತ ನಡೆಯೇ ಜನತೆ ನಿರ್ಣಯ ಕೈಗೊಂಡು ಬಿಜೆಪಿಗೆ ಅಧಿಕಾರ ನೀಡಿದ್ದು, 2024ಕ್ಕೂ ನೀಡಲಿದ್ದಾರೆ ಎಂದರು.
ಕೈ ದುರಾಡಳಿತಕ್ಕೆ ಬೇಸತ್ತೇ ಜನತೆ ಬಿಜೆಪಿಗೆ ಆರ್ಶೀವಾದ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಕೆಲಸ ದೇಶದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದಕ್ಕೆ ಕೈ ಸಿರ್ಟಿಫಿಕೇಟ್ ಅಗತ್ಯವಿಲ್ಲ ಎಂದು ತೀರುಗೇಟು ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!