ಹೊಸದಿಗಂತ ಡಿಜಿಟಲ್ ಡೆಸ್ಕ್:
ದೀಪಾವಳಿ ಬಂತೆಂದ್ರೆ ಯಾವುದೇ ಕಂಪನಿಯ ಉದ್ಯೋಗಿಗಳಿಗೆ ಖುಷಿ ಆಗೋದಂತೂ ಗ್ಯಾರೆಂಟಿ, ಯಾಕಂದ್ರೆ ಬೆಳಕಿನ ಹಬ್ಬಕ್ಕೆ ಬೋನಸ್ ಪಕ್ಕಾ!
ಆದ್ರೆ ಇಲ್ಲೊಂದು ಕಂಪನಿ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಉದ್ಯೋಗಿಗಳಿಗೆ ಕಾರ್‌ನ್ನೇ ಗಿಫ್ಟ್ ಮಾಡಿದೆ.
ತಮ್ಮ ಕಂಪನಿಯಲ್ಲಿ ಕೆಲಸ ಮಾಡುವ 12 ಉದ್ಯೋಗಿಗಳನ್ನು ಸೆಲೆಕ್ಟ್ ಮಾಡಿ ಅವರಿಗೆ ಟಾಟಾ ಪಂಚ್ ಕಾರ್‌ನ್ನು ಗಿಫ್ಟ್ ಮಾಡಿದೆ. ಹರಿಯಾಣದ ಪಂಚಕುಲದಲ್ಲಿರುವ ಫಾರ್ಮಾಸ್ಯುಟಿಕಲ್ ಕಂಪನಿ ನಿರ್ದೇಶಕ ಭಾಟಿಯಾ ಅವರು ತಮ್ಮ ಉದ್ಯೋಗಿಗಳಿಗೆ ಈ ರೀತಿ ಕಾರ್ ಉಡುಗೊರೆ ನೀಡಿ ಸರ್ಪೈಸ್ ಕೊಟ್ಟಿದ್ದಾರೆ.
12 ಜನ ಎಂಪ್ಲಾಯಿಗಳಲ್ಲಿ ಆಫೀಸ್ ಬಾಯ್ ಕೂಡ ಇದ್ದಾರೆ, ಎಲ್ಲ ಕೆಲಸವನ್ನು ಒಂದೇ ರೀತಿ ಪರಿಗಣಿಸಿರುವ ಭಾಟಿಯಾ ಅವರು ಉದ್ಯೋಗಿಗಳು ಚೆನ್ನಾಗಿದ್ರೆ ಮಾತ್ರ ಕಂಪನಿ ಚೆನ್ನಾಗಿರುತ್ತದೆ ಎಂದು ಹೇಳಿದ್ದಾರೆ.