ಗೃಹಜ್ಯೋತಿ ಯೋಜನೆಗೆ ಉತ್ತಮ ಪ್ರತಿಕ್ರಿಯೆ: ಒಂದು ಲಕ್ಷಕ್ಕೂ ಹೆಚ್ಚು ಜನರಿಂದ ಅರ್ಜಿ ಸಲ್ಲಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೃಹಜ್ಯೋತಿ ಯೋಜನೆ ನೋಂದಣಿಗೆ ಅರ್ಜಿ ಸಲ್ಲಿಕೆ ಆರಂಭವಾಗಿ ಎರಡು ದಿನವಾಗಿದೆ. ಮೊದಲ ದಿನವೇ 55 ಸಾವಿರ ಮಂದಿ ಅರ್ಜಿ ಸಲ್ಲಿಸಿದ್ದರು.
ಇದೀಗ ಎರಡನೇ ದಿನದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಒಟ್ಟಾರೆ 1,06,958 ಜನರು ಅರ್ಜಿ ಸಲ್ಲಿಕೆ ಮಾಡಿದ್ದು, ಒಟ್ಟಾರೆ 1,61,958 ಅಪ್ಲಿಕೇಷನ್‌ಗಳು ಸಲ್ಲಿಕೆಯಾಗಿವೆ.
ಆನ್‌ಲೈನ್‌ನಲ್ಲಿ ಸೇವಾ ಸಿಂಧು ಮೂಲಕ ಹಾಗೂ ಆಫ್‌ಲೈನ್‌ನಲ್ಲಿ ಬೆಂಗಳೂರು ಒನ್, ಗ್ರಾಮಾ ಒನ್, ಬೆಸ್ಕಾಂ ಕಚೇರಿಗಳಲ್ಲಿ ಅರ್ಜಿ ಸಲ್ಲಿಕೆ ಮಾಡಿಸಿಕೊಳ್ಳಬಹುದಾಗಿದೆ.

https://twitter.com/mdbescom/status/1670840093475749889?s=20

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!