ದೇಶದ ಹೈಡ್ರೋಜನ್‌ ಮಿಷನ್‌ ಗೆ ಬಲ ತುಂಬಲಿದೆ ಗುಜರಾತಿನಲ್ಲಿ ಸ್ಥಾಪಿತವಾಗಿರೋ ಹಸಿರು ಹೈಡ್ರೋಜನ್‌ ಪ್ಲಾಂಟ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
ದೇಶದ ಪ್ರಮುಖ ಇಂಜಿನಿಯರಿಂಗ್‌ ಕಂಪನಿಗಳಲ್ಲೊಂದಾದ ಲಾರ್ಸೆನ್ ಮತ್ತು ಟೂಬ್ರೊ (ಎಲ್ & ಟಿ) ಕಂಪನಿಯು ಗುಜರಾತಿನ ಹಜೀರಾದಲ್ಲಿ ಹಸಿರು ಹೈಡ್ರೋಜನ್‌ ಸ್ಥಾವರವನ್ನು ಸ್ಥಾಪಿಸಿದೆ. ಹಸಿರು ಹೈಡ್ರೋಜನ್‌ ಉತ್ಪಾದನೆಗಾಗಿ ಈ ಹಿಂದೆ ಕಂಪನಿಯು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಮತ್ತು ರಿನ್ಯೂ ಪವರ್‌ನೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಇದಾದ ಐದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಹಸಿರು ಹೈಡ್ರೋಜನ್ ಘಟಕವನ್ನು ಐಒಸಿ ಅಧ್ಯಕ್ಷ ಶ್ರೀಕಾಂತ್ ಮಾಧವ್ ವೈದ್ಯ ಶನಿವಾರ ಉದ್ಘಾಟಿಸಿದರು.‌ ಈ ಸ್ಥಾವರವು ಪ್ರತಿದಿನ 45 ಕೆಜಿ ಹಸಿರು ಹೈಡ್ರೋಜನ್ ಅನ್ನು ಉತ್ಪಾದಿಸುತ್ತದೆ, ಇದು ಕಂಪನಿಯ ಹಜಿರಾ ಉತ್ಪಾದನಾ ಸಂಕೀರ್ಣದಲ್ಲಿ ಬಳಕೆಯಾಗಲಿದೆ.

ಕ್ಷಾರೀಯ (380 kW) ಮತ್ತು ಪಾಲಿಮರ್ ಎಲೆಕ್ಟ್ರೋಲೈಟ್ ಮೆಂಬರೇನ್ (420 kW) ತಂತ್ರಜ್ಞಾನಗಳನ್ನು ಒಳಗೊಂಡಿರುವ 800 kW ಎಲೆಕ್ಟ್ರೋಲೈಸರ್ ಸಾಮರ್ಥ್ಯದಲ್ಲಿ ಹಸಿರು ಹೈಡ್ರೋಜನ್ ಸ್ಥಾವರವನ್ನು ವಿನ್ಯಾಸಗೊಳಿಸಲಾಗಿದೆ. ಇದು 990kW ಸಾಮರ್ಥ್ಯದ ಮೇಲ್ಛಾವಣಿ ಸೌರ ಸ್ಥಾವರ ಮತ್ತು 500kWh ಬ್ಯಾಟರಿ ಶಕ್ತಿ ಶೇಖರಣಾ ವ್ಯವಸ್ಥೆಯಿಂದ (BESS) ಶಕ್ತಿಯನ್ನು ಪಡೆಯುತ್ತದೆ.

ಯೋಜನೆಯ ಮೊದಲ ಹಂತದ ಭಾಗವಾಗಿ, 380 kW ಕ್ಷಾರೀಯ ವಿದ್ಯುದ್ವಿಭಜಕವನ್ನು ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿ 420 kW PEM ಎಲೆಕ್ಟ್ರೋಲೈಸರ್ ಜೊತೆಗೆ ಸೌರ ಸ್ಥಾವರದ ಸಾಮರ್ಥ್ಯವನ್ನು 1.6 MW ಗೆ ಹೆಚ್ಚಿಸುವ ಕುರಿತು ಯೋಚಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!