ಕೇಂದ್ರದಿಂದ ಮಹಾರಾಷ್ಟ್ರಕ್ಕೆ ಮೂರು ಮೆಗಾ ರೈಲು ಯೋಜನೆಗೆ ಹಸಿರು ನಿಶಾನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಮಹಾರಾಷ್ಟ್ರಕ್ಕೆ ಕೇಂದ್ರದಿಂದ ಮೂರು ಮೆಗಾ ರೈಲು ಯೋಜನೆಗಳನ್ನು ಘೋಷಿಸಲಾಗಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮುಂಬೈಗೆ 300 ಹೊಸ ಸ್ಥಳೀಯ ರೈಲು, ವಸಾಯಿಯಲ್ಲಿ ಮೆಗಾ ರೈಲು ಟರ್ಮಿನಲ್ ಅನುಮೋದನೆಗೊಂಡಿರುವುದಾಗಿ ತಿಳಿಸಿದ್ದಾರೆ.

ಈ ನಿರ್ಧಾರ ತೆಗೆದುಕೊಂಡ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರಮುಖ ಮೂರು ರೈಲು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

ಮುಂಬೈ ಸೆಂಟ್ರಲ್‌ನ ಪರೇಲ್, ಎಲ್‌ಟಿಟಿ, ಕಲ್ಯಾಣ್ ಮತ್ತು ಪನ್‌ವೆಲ್‌ನಲ್ಲಿನ ಟರ್ಮಿನಲ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲು ಪೂರ್ವಾಂಚಲ್‌ನಿಂದ ಮುಂಬೈಗೆ ಹೊಸ ಕಾರಿಡಾರ್ ಅನ್ನು ಸಂಪರ್ಕಿಸಲು ಕೇಂದ್ರ ರೈಲ್ವೆಯ ನಿರ್ಧಾರ ತೆಗೆದುಕೊಂಡಿದೆ. ಮುಂಬೈ ಸೆಂಟ್ರಲ್, ಬಾಂದ್ರಾ ಟರ್ಮಿನಲ್‌ಗಳ ಸಾಮರ್ಥ್ಯವನ್ನು ಹೆಚ್ಚಿಸಲು ಜೋಗೇಶ್ವರಿಯಲ್ಲಿ ಹೊಸ ಟರ್ಮಿನಲ್ ಸ್ಥಾಪನೆಗೆ ಮುಂದಾಗಿದೆ.

ಅಲ್ಲದೇ ವಸಾಯಿಯಲ್ಲಿ ಹೊಸ ಮೆಗಾ ರೈಲು ಟರ್ಮಿನಲ್ ಜೊತೆಗೆ 300 ಹೊಸ ರೈಲುಗಳಿಗೆ ಅನುಮೋದನೆ ನೀಡಲಾಗಿದೆ. ಈ ಯೋಜನೆಗಳು ಲಕ್ಷಾಂತರ ಮುಂಬೈ ಜನರ ಪ್ರಯಾಣವನ್ನು ಆರಾಮದಾಯಕವಾಗಿಸುವುದು ಮಾತ್ರವಲ್ಲದೇ, ಈ ವಲಯದಲ್ಲಿ ವ್ಯಾಪಾರ, ಸಂಚಾರ ಸಂಪರ್ಕವನ್ನು ಬಲಪಡಿಸುತ್ತದೆ ಎಂದು ಅವರು ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!