ಹೊಸದಿಗಂತ ಡಿಜಿಟಲ್ ಡೆಸ್ಕ್:
ಮುಂಬೈನಲ್ಲಿ ಜಾರಿ ನಿರ್ದೇಶನಾಲಯ ಇಂದು ಶಿಲ್ಪಾ ಶೆಟ್ಟಿ ಪತಿ ರಾಜ್ ಕುಂದ್ರಾಗೆ ಸಂಬಂಧಿಸಿದ ಹಲವು ಜಾಗಗಳಲ್ಲಿ ದಾಳಿ ಮಾಡಿದ್ದು , ಜೊತೆಗೆ ಶಿಲ್ಪಾ ಶೆಟ್ಟಿ ನಿವಾಸ ಜುಹು ಮೇಲೆಯೂ ಕೂಡ ದಾಳಿ ಮಾಡಿದೆ.
ಅಕ್ರಮ ಹಣ ವರ್ಗಾವಣೆ ಆರೋಪ ಹಾಗೂ ಅಶ್ಲೀಲ ಚಿತ್ರ ತಯಾರಿಸಿ ಮಾರಾಟ ಮಾಡುತ್ತಿರುವ ಆರೋದಡಿಯಲ್ಲಿ ಈ ಒಂದು ಇಡಿ ರೇಡ್ ನಡೆದಿದೆ ಎನ್ನಲಾಗಿದೆ.
ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಈ ಜೋಡಿ ನಿವಾಸದ ಮೇಲೆ ಇಡಿ ದಾಳಿಯಿಟ್ಟಿದ್ದು ರಾಜ್ ಕುಂದ್ರಾ ಹಾಗೂ ಶಿಲ್ಪಾ ಶೆಟ್ಟಿಗೆ ಶಾಕ್ ನೀಡಿದೆ. ರಾಜ್ ಕುಂದ್ರಾ ಈ ಹಿಂದೆ ಅಂದ್ರೆ 2021ರಲ್ಲಿ ಮುಂಬೈ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಸದ್ಯ ಜಾಮೀನಿನ ಮೇಲೆ ಆಚೆ ಇದ್ದಾರೆ. ಸದ್ಯ ಅಕ್ರಮವಾಗಿ ಹಣ ವರ್ಗಾವಣೆ ಹಾಗೂ ಅಜಯ್ ಭಾರದ್ವಾಜ್ ಜೊತೆ ಸೇರಿ ಬಿಟ್ಕ್ವಾಯಿನ್ ವಂಚನೆಯ ಆರೋಪವೂ ಕೂಡ ರಾಜ್ ಕುಂದ್ರಾ ಮೇಲಿದೆ. ಇಡಿ ಶಿಲ್ಪಾ ಶೆಟ್ಟಿಯವರ ಜುಹು ಮನೆಯನ್ನು ಸಂಪೂರ್ಣವಾಗಿ ವಶಕ್ಕೆ ತೆಗೆದುಕೊಂಡಿದ್ದು ಶೋಧ ಕಾರ್ಯವನ್ನು ನಡೆಸಿದ್ದಾರೆ.
ಈ ಒಂದು ಆಸ್ತಿಯನ್ನು ಶಿಲ್ಪಾ ಶೆಟ್ಟಿ ಹೆಸರಿಗೆ ಮಾಡುವ ಮೊದಲು ರಾಜ್ ಕುಂದ್ರಾ ಬಿಟ್ ಕ್ವಾಯಿನ್ ಕೇಸ್ನಲ್ಲಿ ಗಳಿಸಿದ ಹಣವನ್ನು ಈ ಒಂದು ಆಸ್ತಿ ಖರೀದಿಗೆ ಬಳಸಿದ್ದಾರೆ ಎಂಬ ಸಂಶಯದಡಿ ಶಿಲ್ಪಾ ಶೆಟ್ಟಿಯ ಜುಹು ಹೌಸ್ ಮೇಲೆ ದಾಳಿ ಮಾಡಿದೆ.
ಇನ್ನು ವಯಸ್ಕರರ ಚಿತ್ರಗಳನ್ನು ಚಿತ್ರೀಕರಿಸಿದ ಆರೋಪದಲ್ಲಿ ರಾಜ್ ಕುಂದ್ರಾ ಮೇಲೆ ಹಲವು ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇಂಡಿಯನ್ ಪಿನಲ್ ಕೋಡ್ ಸೇರಿದಂತೆ ಐಆರ್ಡಬ್ಲ್ಯೂಎ ಅಡಿಯಲ್ಲಿಯೂ ಕೂಡ ಪ್ರಕರಣ ದಾಖಲಾಗಿದೆ.