ಶ್ರೀನಗರದಲ್ಲಿ ಉಗ್ರರಿಂದ ಗ್ರೆನೇಡ್ ದಾಳಿ: CM ಒಮರ್ ಅಬ್ದುಲ್ಲಾ ರಿಯಾಕ್ಷನ್!

ಹೊಸದಿಗಂತ ಡಿಜಿಟಲ್ ಡೆಸ್ಕ್:   

ಜಮ್ಮು ಮತ್ತು ಕಾಶ್ಮೀರ ಶ್ರೀನಗರದಲ್ಲಿ ಭಾನುವಾರ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದಾರೆ. ಪ್ರವಾಸಿ ಸ್ವಾಗತ ಕೇಂದ್ರ (ಟಿಆರ್‌ಸಿ) ಮತ್ತು ವಾರದ ಮಾರುಕಟ್ಟೆ ಮೇಲೆ ದಾಳಿ ನಡೆದಿದ್ದು, ಈ ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದಾರೆ.

ಈ ದಾಳಿ ಕುರಿತು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಕಳವಳ ವ್ಯಕ್ತಪಡಿಸಿದ್ದಾರೆ.

ಕಣಿವೆಯಲ್ಲಿ ಕೆಲವು ಸಮಯದಿಂದ ದಾಳಿಯ ಸುದ್ದಿ ಮುನ್ನೆಲೆಗೆ ಬರುತ್ತಿವೆ. ಶ್ರೀನಗರದ ಲಾಲ್ ಚೌಕ್​​ನಲ್ಲಿರುವ ‘ಸಂಡೇ ಮಾರ್ಕೆಟ್’ನಲ್ಲಿ ಸರಕುಗಳನ್ನು ಖರೀದಿಸಲು ಬಂದಿದ್ದ ಜನರ ಮೇಲೆ ಗ್ರೆನೇಡ್ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಇಂತಹ ಸುದ್ದಿ ನಿಜಕ್ಕೂ ಆತಂಕಕಾರಿ. ಅಮಾಯಕ ನಾಗರಿಕರನ್ನು ಗುರಿಯಾಗಿಸಲು ಯಾವುದೇ ಸಮರ್ಥನೆ ಇಲ್ಲ. ಕಣಿವೆಯ ಜನರು ಯಾವುದೇ ಭಯವಿಲ್ಲದೆ ತಮ್ಮ ಜೀವನವನ್ನು ನಡೆಸುವಂತಾಗಲು ಎಲ್ಲಾ ಭದ್ರತಾ ಕಾರ್ಯವಿಧಾನಗಳು ಕೆಲಸ ಮಾಡಬೇಕು. ಇದರಿಂದ ಕಣಿವೆಯಲ್ಲಿ ಹರಡುವ ಇಂತಹ ಅಶಾಂತಿಯನ್ನು ನಿಲ್ಲಿಸಬಹುದು ಎಂದು ಹೇಳಿದರು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!