Monday, October 2, 2023

Latest Posts

ಸಿದ್ದು ಸರ್ಕಾರಕ್ಕೆ ತಲೆನೋವಾಯ್ತು ಗೃಹಲಕ್ಷ್ಮಿ ಗ್ಯಾರೆಂಟಿ! ದುಡ್ಡು ಯಾರಿಗೆ ಕೊಡೋದು? ಅತ್ತೆಗಾ- ಸೊಸೆಗಾ?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಐದು ಗ್ಯಾರೆಂಟಿಗಳನ್ನು ಬಿಡುಗಡೆ ಮಾಡುವುದಾಗಿ ಘೋಷಿಸಿದೆ.

ಈಗ ಸರ್ಕಾರ ಅಧಿಕಾರಕ್ಕೆ ಬಂದು ದಿನಗಳೇ ಕಳೆದಿದ್ರೂ ಇನ್ನೂ ಯಾವುದೇ ಗ್ಯಾರೆಂಟಿ ಜನರ ಕೈಗೆ ಸಿಕ್ಕಿಲ್ಲ, ಈ ಬಗ್ಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದ್ದು, ಸಿಎಂ ಸಿದ್ದರಾಮಯ್ಯ ಎಲ್ಲಾ ಸಾಧಕ ಬಾಧಕಗಳನ್ನು ಚರ್ಚಿಸಿದ್ದು, ಜೂನ್ 1 ರಿಂದ ಗ್ಯಾರೆಂಟಿ ಜಾರಿಯಾಗುವ ಸಾಧ್ಯತೆ ಇದೆ.

ಆದರೆ ಸಿದ್ದು ಸರ್ಕಾರಕ್ಕೆ ಗೃಹಲಕ್ಷ್ಮಿ ಗ್ಯಾರೆಂಟಿ ತಲೆನೋವಾಗಿ ಪರಿಣಮಿಸಿದೆ. ಮನೆಯೊಡತಿ ಸೊಸೆಯೋ ಅಥವಾ ಅತ್ತೆಯೋ? ಹಣ ಯಾರಿಗೆ ಕೊಡಬೇಕು? ಎರಡು ಸಾವಿರ ರೂಪಾಯಿ ಯಾರ ಖಾತೆಗೆ ಹೋಗಬೇಕು ಎನ್ನುವುದು ದೊಡ್ಡ ಪ್ರಶ್ನೆಯಾಗಿದೆ.

ಅವಿಭಕ್ತ ಕುಟುಂಬಗಳಲ್ಲಿ ಹಣಕ್ಕಾಗಿ ಪೈಪೋಟಿ ನಡೆದಿದ್ದು, ಮನೆಯ ಎಲ್ಲ ಹೆಂಗಸರಿಗೂ ಹಣ ನೀಡಬೇಕು ಎನ್ನುವ ಕೂಗು ಕೇಳಿ ಬಂದಿದೆ. ಹಾಗಾದ್ರೆ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ? ಕಾದುನೋಡಬೇಕಿದೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!