ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಂಸ್ಕೃತಿಕ ನಗರಿಯಲ್ಲಿ ಕಾಂಗ್ರೆಸ್‌ನ ಮತ್ತೊಂದು ಯೋಜನೆ ಗೃಹಲಕ್ಷ್ಮಿ ಇಂದು ಜಾರಿಯಾಗಲಿದೆ. ಇಂದು ರಾಜ್ಯ ಸರ್ಕಾರ ರಚನೆಯಾಗಿ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಎರಡೂ ಕಾರ್ಯಕ್ರಮಗಳು ಒಟ್ಟಿಗೆ ನಡೆಯಲಿವೆ. ಈ ಕಾರ್ಯಕ್ರಮದಲ್ಲಿ ಹಾಜರಾಗುವ ಗಣ್ಯರಿಗೆ ಉಡುಗೊರೆ ನೀಡಲು ಸುಂದರ ಕಲಾಕೃತಿಗಳು ಸಿದ್ಧವಾಗಿವೆ.
ಕಾವೇರಿ ಎಂಪೋರಿಯಂ ಅವರು ತಯಾರಿಸಲಾದ ಇನ್‌ಲೇ ಆರ್ಟ್ ಮೂಲಕ ರಚಿಸಲಾದ ಕಲಾಕೃತಿಗಳು, ಫೋಟೋ ಫ್ರೇಮ್, ಪ್ರಕೃತಿ ಚಿತ್ರಗಳು ತಯಾರಾಗಿವೆ. ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಲಕ್ಷ್ಮೀ ಹೆಬ್ಬಾಳ್ಕರ್ ಖುದ್ದಾಗಿ ಭೇಟಿ ಕೊಟ್ಟು ಉಡುಗೊರೆಗಳನ್ನು ಪರಿಶೀಲಿಸಿದರು.