ಸರ್ಕಾರಿ ಭೂಮಿ ಒತ್ತುವರಿ ಆರೋಪ: ಪ್ರಕಾಶ್ ರಾಜ್‌ಗೆ ನೊಟೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್ ಹಾಗೂ ಬಾಬಿ ಸಿಂಹ ಅವರಿಗೆ ಸ್ಥಳೀಯ ಆಡಳಿತ ನೊಟೀಸ್ ಜಾರಿ ಮಾಡಿದೆ. ಕೊಡೈಕೆನಾಲ್‌ನ ವಿಲ್‌ಪಟ್ಟಿ ಪಂಚಾಯತ್‌ನಲ್ಲಿ ಬಂಗಲೆ ನಿರ್ಮಿಸಲು ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಆರೋಪ ಎದುರಾಗಿದೆ.

ಈ ಬಗ್ಗೆ ವಿವರಣೆ ನೀಡಿ ಎಂದು ಕೊಡೈಕೆನಾಲ್ ಉಪವಲಯ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರಾಜ್ ಹಾಗೂ ಬಾಬಿ ಸಿಂಹ ಅವರಿಗೆ ನೊಟೀಸ್ ನೀಡಿದ್ದಾರೆ.

ಪಂಚಾಯತಿಯಿಂದ ಯಾವುದೇ ಅನುಮತಿ ಪಡೆಯದೆ ಅಣ್ಣಾನಗರ ಗ್ರಾಮದಲ್ಲಿ ಪ್ರಕಾಶ್ ರಾಜ್ ಬಂಗಲೆ ನಿರ್ಮಿಸಿದ್ದಾರೆ ಎನ್ನಲಾಗಿದೆ. ಇನ್ನು ಪೇತುಪರೈನಲ್ಲಿರುವ ಜಾಗದಲ್ಲಿ ಬಾಬಿ ಸಿಂಹ ಬಂಗಲೆ ನಿರ್ಮಿಸಿದ್ದಾರೆ. ಇವರು 2,500 ಚದರ ಅಡಿಯಲ್ಲಿ ಬಂಗಲೆ ನಿರ್ಮಾಣಕ್ಕೆ ಅನುಮತಿ ಪಡೆದಿದ್ದರು, ಆದರೆ 4000ಚದರ ಅಡಿ ಪ್ರದೇಶದಲ್ಲಿ ಬಂಗಲೆ ನಿರ್ಮಾಣ ಮಾಡುತ್ತಿದ್ದಾರೆ ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!