ಹುಲಿ ಜೊತೆ ಯುವಕರ ವಿಡಿಯೋ ಹುಚ್ಚಾಟ: ವಿಡಿಯೋ ವೈರಲ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಅರಣ್ಯ ಪ್ರದೇಶದಲ್ಲಿ ಹುಲಿಯೊಂದು ರಸ್ತೆ ದಾಟುತ್ತಿರುವುದನ್ನು ನಾಲ್ವರು ಯುವಕರು ವಿಡಯೋ ತೆಗೆಯಲು ಮುಂದಾಗಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್ ನಂದಾ ಈ ವಿಡಿಯೋವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಯುವಕರ ವರ್ತನೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ವೀಡಿಯೊ ಇದು ಯಾವ ಪ್ರದೇಶದಿಂದ ಬಂದಿದೆ ಎಂಬುದು ಗೊತ್ತಾಗಿಲ್ಲ. ಆದರೆ ಈ ವಿಡಿಯೋದಲ್ಲಿ ನಾಲ್ವರು ಯುವಕರು ಸಫಾರಿ ಜೀಪ್‌ನಿಂದ ಕೆಳಗಿಳಿದು ಹುಲಿಯನ್ನು ಹತ್ತಿರದಿಂದ ಫೋಟೋ/ವಿಡಿಯೋ ತೆಗೆಯಲು ಮುಂದಾದರು. ಹುಲಿಯೊಂದು ಕಾಡಿನಿಂದ ನಿಧಾನವಾಗಿ ಹೊರಬಂದು ರಸ್ತೆ ದಾಟುವುದನ್ನು ವಿಡಿಯೋದಲ್ಲಿ ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here