ಜಿಎಸ್ಟಿ ದುಡ್ಡು ಸರಿ ಬರ್ತಿಲ್ಲ ಎಂದ ರಾಜ್ಯಗಳಿಗೆ ವಿತ್ತ ಸಚಿವೆ ಹೇಳಿದ್ದೇನು?

ಹೊಸ ದಿಗಂತ ಡಿಜಿಟಲ್ ಡೆಸ್ಕ್

“ಕೇಂದ್ರವು ರಾಜ್ಯಗಳಿಗೆ ಸಲ್ಲಬೇಕಾದ ಜಿಎಸ್ಟಿ ಹಣವನ್ನು ಸೂಕ್ತವಾಗಿ ವಿತರಿಸುತ್ತಿಲ್ಲ. ಅದರಲ್ಲೂ ಬಿಜೆಪಿಯೇತರ ಪಕ್ಷಗಳು ಆಡಳಿತದಲ್ಲಿರುವ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ” – ಇದು ರಾಜ್ಯಸಭೆಯಲ್ಲಿ ವಿಶೇಷವಾಗಿ ತಮಿಳುನಾಡು ಮತ್ತು ಮಹಾರಾಷ್ಟ್ರದ ಸದಸ್ಯರು ಮಾಡಿದ ಆರೋಪವಾಗಿತ್ತು.

ಇದಕ್ಕೆ ಉತ್ತರಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ರಾಜ್ಯಗಳಿಗೆ ಹಣ ವಿತರಿಸುವುದಕ್ಕೆ ಜಿಎಸ್ಟಿ ಸಮಿತಿ ನಿಗದಿಪಡಿಸಿಕೊಂಡ ನಿರ್ದಿಷ್ಟ ಸೂತ್ರವಿದೆ. ಇದನ್ನು ಕೇಂದ್ರವು ಏಕಪಕ್ಷೀಯವಾಗಿ ಬದಲಿಸುವುದಕ್ಕೆ ಆಗುವುದಿಲ್ಲ. ಕೇಂದ್ರ ತನಗಿಷ್ಟ ಬಂದಂತೆ ಹಣ ವಿತರಣೆ ಮಾಡಲಾಗದು. ಜಿಎಸ್ಟಿ ಕೌನ್ಸಿಲ್ ನಲ್ಲಿ ಎಲ್ಲ ರಾಜ್ಯಗಳ ಹಣಕಾಸು ಸಚಿವರೂ ಇದ್ದಾರೆ. ಇದನ್ನು ರಾಜಕೀಯಗೊಳಿಸುವ ಅಗತ್ಯವಿಲ್ಲ” ಎಂದರು.

“ಮಹಾರಾಷ್ಟ್ರಕ್ಕೆ ಇನ್ನೂ ಹೆಚ್ಚಿನ ಹಣ ಬರಬೇಕು ಎಂದು ಕೇಳುವುದೇನೋ ಸರಿ. ಆದರೆ ಜಿಎಸ್ಟಿ ಕೌನ್ಸಿಲ್ ವಿತರಣಾ ಸೂತ್ರದ ಪ್ರಕಾರವೇ ಹಣ ನೀಡಲಾಗಿದೆ. ಉಳಿದ ರಾಜ್ಯಗಳಿಗೆ ಹೋಲಿಸಿದರೆ ಹೆಚ್ಚಿನ ಹಣ ವಿತರಿಸಿರುವುದನ್ನೂ ಅಲ್ಲಿ ಗಮನಿಸಬಹುದು” ಎಂದು ಸಚಿವರು ವಿವರಿಸಿದರು.

ಜಿಎಸ್ಟಿ ಫಾರ್ಮುಲಾವನ್ನು ಯಾವುದೇ ವ್ಯಕ್ತಿ ಬದಲಾಯಿಸಲಾರ. ಹೀಗಾಗಿ ಇದರಲ್ಲಿ ಪಕ್ಷ ರಾಜಕಾರಣವನ್ನು ಹುಡುಕುವುದು ಎಲ್ಲ ರಾಜ್ಯಗಳ ಉಪಸ್ಥಿತಿ ರುವ ಜಿಎಸ್ಟಿ ಕೌನ್ಸಿಲಿಗೆ ಅನ್ಯಾಯ ಮಾಡಿದಂತೆ ಎಂದಿದ್ದಾರೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!