ಉತ್ತರದ ಗಡಿಯಲ್ಲಿ ಉಗ್ರ ಸಂಹಾರ- ಇಲ್ಲಿದೆ ಸರ್ಕಾರ ಒದಗಿಸಿದ ಅಂಕಿಅಂಶ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಇಸ್ವಿ 2021ರಲ್ಲಿ ಪಾಕಿಸ್ತಾನದ ಕಡೆಯಿಂದ ಭಾರತಕ್ಕೆ ನುಗ್ಗುತ್ತಿದ್ದ 77 ಉಗ್ರರನ್ನು ಕೊಲ್ಲಲಾಗಿದೆ ಹಾಗೂ 12 ಮಂದಿಯನ್ನು ಬಂಧಿಸಲಾಗಿದೆ. ಇದು ಗೃಹ ಸಚಿವಾಲಯವು ಲೋಕಸಭೆಯಲ್ಲಿ ಮಂಗಳವಾರ ಒದಗಿಸಿರುವ ಮಾಹಿತಿ. ಇದೇ ಅಂಕಿಅಂಶ 2020ರಲ್ಲಿ 99 ಉಗ್ರ ಸಂಹಾರ ಹಾಗೂ 19 ಬಂಧನಗಳಾಗಿತ್ತು.

ಅಂತೆಯೇ 2021ರಲ್ಲಿ ಉಗ್ರ ಸಂಬಂಧಿ ಸಂಘರ್ಷದಲ್ಲಿ ಭಾರತ 42 ಯೋಧರನ್ನು ಕಳೆದುಕೊಂಡಿದೆ ಹಾಗೂ ಗಾಯಗೊಂಡವರ ಸಂಖ್ಯೆ 117. 2020ರಲ್ಲಿ ಈ ಸಂಖ್ಯೆಗಳು ಅನುಕ್ರಮವಾಗಿ 62 ಮತ್ತು 106 ಆಗಿದ್ದವು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!