Tuesday, March 28, 2023

Latest Posts

SHOCKING| ಕ್ರಿಕೆಟ್ ಆಡುತ್ತಲೇ ಕುಸಿದು ಬಿದ್ದ ಉದ್ಯೋಗಿ: ಹೃದಯಾಘಾತದಿಂದ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹಠಾತ್ ಹೃದಯಾಘಾತ, ಕುಸಿದು ಬಿದ್ದು ಸಾವನ್ನಪ್ಪುತ್ತಿರುವ ಘಟನೆಗಳು ದಿನದಿಂದ ದಿನಕ್ಕೆ ಏರುತ್ತಲೇ ಇವೆ. ಯುವಕರಿಂದ ಹಿಡಿದು ಮುದುಕರವರೆಗೂ ಈ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಗುಜರಾತ್‌ನ ಅಹಮದಾಬಾದ್‌ನಲ್ಲಿ ಇಂತಹದ್ದೇ ಘಟನೆ ನಡೆದಿದೆ. ಜಿಎಸ್‌ಟಿ ಉದ್ಯೋಗಿಯೊಬ್ಬರಿಗೆ ಕ್ರಿಕೆಟ್ ಪಂದ್ಯ ಆಡುತ್ತಿದ್ದಾಗ ಹೃದಯಾಘಾತವಾಗಿತ್ತು ಆಟದಲ್ಲಿಯೇ ನೆಲದ ಮೇಲೆ ಕುಸಿದು ಬಿದ್ದ. ಸಹೋದ್ಯೋಗಿಗಳು ಅವನನ್ನು ಮೇಲಕ್ಕೆತ್ತಲು ಪ್ರಯತ್ನಿಸುವಷ್ಟರಲ್ಲಿ ಆತ ಸತ್ತಿದ್ದಾನೆ.

ಗುಜರಾತ್‌ನ ಅಹಮದಾಬಾದ್‌ನಲ್ಲಿ ಉದ್ಯೋಗಿಗಳ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಶನಿವಾರ, ರಾಜ್‌ಕೋಟ್-ಸೂರತ್ ಪ್ರದೇಶಗಳ ಉದ್ಯೋಗಿಗಳ ನಡುವೆ ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಸುರೇಂದ್ರ ನಗರ ಜಿಲ್ಲಾ ಪಂಚಾಯತ್ ನ ಜಿಎಸ್ ಟಿ ಉದ್ಯೋಗಿ ವಸಂತ ರಾಥೋಡ್ ಭಾಗವಹಿಸಿದ್ದರು. ರಾಥೋಡ್ ಬೌಲಿಂಗ್ ಮಾಡುವ ವೇಳೆ ಕುಸಿದುಬಿದ್ದಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದ ಕಂಗಾಲಾದ ಸಹೋದ್ಯೋಗಿಗಳು ವಸಂತ್ ಬಳಿ ಓಡಿ ಮೇಲೆತ್ತಲು ಯತ್ನಿಸಿದಾಗ ಅದಾಗಲೇ ಮೃತಪಟ್ಟಿರುವುದು ಕಂಡು ಬಂತು.

ವೈದ್ಯರ ವಿವರಗಳ ಪ್ರಕಾರ ವಸಂತ್ ರಾಥೋಡ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಮತ್ತೊಂದೆಡೆ..ಆಂಧ್ರಪ್ರದೇಶದ ಆದೋನಿ ಪಟ್ಟಣದ ಆರ್ಟ್ಸ್ ಕಾಲೇಜು ರಸ್ತೆಯಲ್ಲಿರುವ ಜಿಮ್ ನಲ್ಲಿ ವ್ಯಾಯಾಮ ಮುಗಿಸಿ ಹೊರಬಂದ ಯುವಕ ಹೃದಯಾಘಾತವಾಗಿ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!