Friday, March 24, 2023

Latest Posts

CINEMA| ಕುದುರೆಯೇರಿದ ಸಮಂತಾ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:‌ 

ಟಾಲಿವುಡ್ ತಾರೆ ಸಮಂತಾ ಅನಾರೋಗ್ಯದಿಂದ ಶೀಘ್ರ ಗುಣಮುಖರಾಗಲಿ ಎಂದು ಹಾರೈಸುತ್ತಿದ್ದಾರೆ. ಸಮಂತಾ ತಮ್ಮ ಚಿತ್ರಗಳನ್ನು ಸತತವಾಗಿ ಬಿಡುಗಡೆ ಮಾಡುವ ಮೂಲಕ ಬಾಕ್ಸ್ ಆಫೀಸ್ ನಲ್ಲಿ ಸದ್ದು ಮಾಡುತ್ತಿದ್ದಾರೆ. ಈಗಾಗಲೇ ಯಶೋದಾ ಸಿನಿಮಾದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಈ ಚೆಲುವೆ ಇದೀಗ ತಮ್ಮ ಮುಂದಿನ ಸಿನಿಮಾ ‘ಶಾಕುಂತಲಂ’ ಕೂಡ ರೆಡಿ ಮಾಡಿದ್ದಾರೆ.

ಈ ಸಿನಿಮಾವನ್ನು ಪೌರಾಣಿಕ ಸಿನಿಮಾವಾಗಿ ನಿರ್ದೇಶಕ ಗುಣಶೇಖರ್ ನಿರ್ದೇಶಿಸಿರುವ ರೀತಿ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗುವುದು ಖಚಿತ ಎಂದು ಚಿತ್ರ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ. ಈಗೀಗ ಚೇತರಿಸಿಕೊಳ್ಳುತ್ತಿರುವ ಸಮಂತಾ ಸದ್ಯ ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ. ‘ಸಿಟಾಡೆಲ್’ ವೆಬ್ ಸೀರೀಸ್ ನಲ್ಲಿ ನಟಿಸುತ್ತಿರುವ ಸಮಂತಾ ಇತ್ತೀಚೆಗೆ ಕುದುರೆ ಏರಿದ್ದಾರೆ.

ಸಮಂತಾ ಈ ರೀತಿ ಕುದುರೆ ಸವಾರಿ ಮಾಡುತ್ತಿರುವುದನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದಾರೆ. ತಮ್ಮ ನೆಚ್ಚಿನ ನಾಯಕಿ ಬೇಗನೇ ಕಾಯಿಲೆಯಿಂದ ಹೊರಬಂದು ಸುಖವಾಗಿರಲಿ ಎಂದು ಹರಸುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!