October 9, 2026
Friday, October 9, 2026
spot_img

ಶಾಲೆಯಲ್ಲಿ ಮಕ್ಕಳ ಜತೆ ಆಟವಾಡುವ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ಅತಿಥಿ ಶಿಕ್ಷಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಶಾಲೆಯ ಊಟದ ಬ್ರೇಕ್‌ನಲ್ಲಿ ಮಕ್ಕಳ ಜೊತೆ ಆಟ ಆಡ್ತಿದ್ದ ಅತಿಥಿ ಶಿಕ್ಷಕರೊಬ್ಬರು ಹೃದಯಾಘಾತದಿಂದ ನಿಧನರಾಗಿರುವ ಘಟನೆ ರಾಯಚೂರಿನ ಮಸ್ಕಿಯ ಮೆದಿಕಿನಾಳ ಗ್ರಾಮದಲ್ಲಿ ನಡೆದಿದೆ.

29 ವರ್ಷದ ವೀರನಗೌಡ ಪಾಟೀಲ್ ಮೃತರು. ಮೆದಿಕಿನಾಳ ಸರ್ಕಾರಿ ಪ್ರೌಢ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿದ್ದ ವೀರನಗೌಡ ಪಾಟೀಲ್ ಊಟದ ನಂತರ ಮಕ್ಕಳೊಂದಿಗೆ ಆಟವಾಡುತ್ತಿದ್ದ ವೇಳೆ ಕುಸಿದು ಬಿದ್ದಿದ್ದಾರೆ. ಕೂಡಲೇ ಮಸ್ಕಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲೇ ಮಾರ್ಗಮಧ್ಯೆ ಸಾವನ್ನಪ್ಪಿದ್ದಾರೆ.

ಇಷ್ಟ ಸಣ್ಣ ವಯಸ್ಸಿನಲ್ಲಿಯೇ ಹೃದಯಾಘಾತದಿಂದ ಶಿಕ್ಷರು ಮೃತಪಟ್ಟಿರುವುದು ಸಹೋದ್ಯೋಗಿಗಳಿಗೆ, ವಿದ್ಯಾರ್ಥಿಗಳಿಗೆ ಆಘಾತ ತಂದಿದೆ.

Must Read