ನಾನು ಸೃಷ್ಟಿಸಿದ ಗುಜರಾತ್: ಪ್ರಧಾನಿ ಮೋದಿ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗುಜರಾತ್​ ವಿಧಾನ ಸಭೆಯ ಚುನಾವಣಾ ಪ್ರಚಾರದಲ್ಲಿರುವ ಪ್ರಧಾನಿ ಮೋದಿ ,”ಗುಜರಾತ್​ ನಾನು ನಿರ್ಮಿಸಿದ್ದೇನೆ” ಎಂದು ಘೋಷವಾಕ್ಯ ಮೊಳಗಿಸಿದರು.

ಆರಂಭದಲ್ಲಿ ಗುಜರಾತಿ ಭಾಷೆಯಲ್ಲಿಯೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ ಅವರು, ಆ ಗುಜರಾತ್, ಮೈ ಬ್ನವೂ ಛೇ (ನಾನು ಸೃಷ್ಟಿಸಿದ ಗುಜರಾತ್​) ಎಂದು ಘೋಷಣೆ ಮೊಳಗಿಸಿದರು.

ಕಪರ್ದಾದಲ್ಲಿ ಇಂದುಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ದ್ವೇಷವನ್ನು ಹರಡುವ ಮತ್ತು ಗುಜರಾತ್‌ಗೆ ಕಂಟಕವಾಗುವ ಶಕ್ತಿಗಳನ್ನು ಮುಂದಿನ ತಿಂಗಳು ನಡೆಯುವ ಚುನಾವಣೆಯ ಮೂಲಕ ರಾಜ್ಯದಿಂದಲೇ ಹೊರದಬ್ಬಲಾಗುವುದು ಎಂದರು.

ಈ ಬಾರಿಯ ಎಲೆಕ್ಷನ್​ನಲ್ಲಿ ದಾಖಲೆಯ ಅಂತರದಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ . ನನ್ನ ಆಡಳಿತದ ಅವಧಿಗಿಂತಲೂ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಗೆದ್ದು ಇತಿಹಾಸ ನಿರ್ಮಿಸಲಿದೆ. ಚುನಾವಣೆಗೆ ಹೆಚ್ಚಿನ ಸಮಯ ಹೊಂದಿಸಲು ಸಿದ್ಧನಿದ್ದೇನೆ ಎಂದು ಮೋದಿ ಹೇಳಿದರು.

ಅಪ್ ವಿರುದ್ಧ ಮಾತನಾಡಿದ ಮೋದಿ, ರಾಜ್ಯದಲ್ಲಿ ಕೆಲವರು ಬಿಜೆಪಿ ವಿರುದ್ಧ ಜನರಲ್ಲಿ ದ್ವೇಷ ಬಿತ್ತುತ್ತಿದ್ದಾರೆ. ಅಂಥವರಿಗೆ ಚುನಾವಣೆಯಲ್ಲಿ ಉತ್ತರ ನೀಡಲಾಗುವುದು. ಗುಜರಾತಿನಿಂದಲೇ ಅಂಥವರನ್ನು ಹೊರದಬ್ಬಲಾಗುವುದು ಎಂದು ಗುಡುಗಿದರು.

182 ಸ್ಥಾನಗಳ ಗುಜರಾತ್​ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!