ಟಿ20 ವಿಶ್ವಕಪ್ ನ ಸೆಮೀಸ್​ಗೆ ಟೀಮ್ ರೆಡಿ: ಭಾರತ vs ಇಂಗ್ಲೆಂಡ್‌, ಪಾಕಿಸ್ತಾನ vs ನ್ಯೂಜಿಲೆಂಡ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಟಿ20 ವಿಶ್ವಕಪ್​ನ ಸೂಪರ್​ 12 ಹಂತದ ಪಂದ್ಯಗಳು ಮುಕ್ತಾಯವಾಗಿದ್ದು, ಗ್ರೂಪ್ 1 ರಲ್ಲಿ ನ್ಯೂಜಿಲ್ಯಾಂಡ್​ ಮತ್ತು ಇಂಗ್ಲೆಂಡ್​ ಸೆಮೀಸ್​ಗೆ ಟಿಕೆಟ್​ ಪಡೆದಿದ್ದರೆ, ಎರಡನೇ ಗ್ರೂಪಿನಲ್ಲಿ ಭಾರತ ಮತ್ತು ಪಾಕಿಸ್ತಾನ ನಾಲ್ಕರ ಘಟ್ಟಕ್ಕೆ ಲಗ್ಗೆ ಇಟ್ಟಿವೆ.

ಇಂದು ಭಾರತವನ್ನು ಸೋಲಿಸಿದ್ದ ದಕ್ಷಿಣ ಆಫ್ರಿಕಾನೆದರ್​ಲ್ಯಾಂಡ್ಸ್​ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿತು. ಈ ಮೂಲಕ ಕ್ರಿಕೆಟ್​ ಲೆಕ್ಕಾಚಾರ ತಲೆಕೆಳಗೆ ಆಗಿದ್ದು, ಇತ್ತ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ಜಯ ಸಾಧಿಸಿ ಮುಂದಿನ ಹಂತಕ್ಕೆ ಬಡ್ತಿ ಪಡೆಯಿತು.

ಇನ್ನು ಆಫ್ರಿಕಾ , ನೆದರ್​ಲ್ಯಾಂಡ್ಸ್​ ವಿರುದ್ಧ ಸೋತ ಬೆನ್ನಲ್ಲೇ ಭಾರತ ಸೆಮಿಫೈನಲ್​ಗೆ ನೇರಪ್ರವೇಶ ಪಡೆಯಿತು. ಜಿಂಬಾಬ್ವೆ ವಿರುದ್ಧವು ಭಾರತ ಗೆಲುವಿನ ನಗೆಬೀರಿತು.

ಹೀಗಾಗಿ ಸೆಮೀಸ್​ ನಲ್ಲಿ ನವೆಂಬರ್​ 9 ರಂದು ನ್ಯೂಜಿಲ್ಯಾಂಡ್​​ ಮತ್ತು ಪಾಕಿಸ್ತಾನ ಎದುರಾದರೆ, 10 ರಂದು ಭಾರತ ಮತ್ತು ಇಂಗ್ಲೆಂಡ್​​ ಸೆಣಸಾಡಲಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!