ಚೆನ್ನೈಗೆ ಸೋಲು: ಕ್ವಾಲಿಫೈಯರ್ ಗೆ ಎಂಟ್ರಿ ಪಡೆದ ಗುಜರಾತ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೆನ್ನೈ ಸೂಪರ್ ಕಿಂಗ್ಸ್ ನೀಡಿದ್ದ ಮೊತ್ತವನ್ನು ಹಾರ್ದಿಕ್ ಪಾಂಡ್ಯ ಬಳಗವು ಸುಲಭವಾಗಿ ಬೆನ್ನಟ್ಟಿ ಏಳು ವಿಕೇಟ್​ಗಳಿಂದ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಅಗ್ರಸ್ಥಾನ ಭದ್ರ ಪಡಿಸಿಕೊಂಡಿರುವ ಟೈಟನ್ಸ್ ‘ಕ್ವಾಲಿಫೈಯರ್ 1’ ನಲ್ಲಿ ಆಡುವುದು ಪಕ್ಕಾ ಆಗಿದೆ.
ಚೆನ್ನೈ ತಂಡ ನೀಡಿದ್ದ 133 ರನ್​ಗಳ ಗುರಿಯನ್ನು ವೃದ್ಧಿಮಾನ್ ಸಹಾ ಅಜೇಯ 67 ರನ್​ನ ಸಹಾಯದಿಂದ 3 ವಿಕೇಟ್​ ನಷ್ಟಕ್ಕೆ ಗಳಿಸಲು ಸಾಧ್ಯವಾಯಿತು.
ಸಹಾ ಮತ್ತು ಗಿಲ್(18)​ ಮೊದಲ ವಿಕೇಟ್​ಗೆ 59 ರನ್​ನ ಜೊತೆಯಾಟ ನೀಡಿದರು. ಗಿಲ್​ ವಿಕೇಟ್​ ನಂತರ ಮ್ಯಾಥ್ಯೂ ವೇಡ್ 20 ರನ್‌ಗಳ ಕಾಣಿಕೆ ನೀಡಿದರು. ಹಾರ್ದಿಕ್ ಪಾಂಡ್ಯ 7 ಹಾಗೂ ಡೇವಿಡ್ ಮಿಲ್ಲರ್ ಅಜೇಯ 15 ರನ್ ಗಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!